ಡಿಜಿಟಲ್ ಡೆಸ್ಕ್ : 8 ದಿನದ ಹಸುಗೂಸಿನ ಮೇಲೆ ಪಾಪಿ ತಂದೆಯೋರ್ವ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ದಕ್ಷಿಣ ಆಫ್ರಿಕಾದ ವ್ಯಕ್ತಿಯೊಬ್ಬ ತನ್ನ ನವಜಾತ ಮಗಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಹ್ಯೂಗೋ ಫೆರೇರಾ ಅವರು ಮಗುವಿನೊಂದಿಗೆ ಏಕಾಂಗಿಯಾಗಿದ್ದರು, ಅವರ ತಾಯಿ ಶಿಶು ಸಾಮಗ್ರಿಗಳಿಗಾಗಿ ಶಾಪಿಂಗ್ ಮಾಡಲು ಹೊರಗೆ ಹೋಗಿದ್ದರು. ಈ ವೇಳೆ ಅತ್ಯಾಚಾರ ಎಸಗಿ ಹತ್ಯೆಗೈದಿದ್ದಾನೆ. ತನಿಖಾಧಿಕಾರಿ ತನಿಖೆ ವೇಳೆ ಈ ತಪ್ಪೊಪ್ಪಿಕೊಂಡಿದ್ದಾನೆ.ಶಾಪಿಂಗ್ ಹೋದ ತಾಯಿ ಮನೆಗೆ ಬಂದು ನೋಡಿದಾಗ ಮಗು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ ಎಂದು ಹೇಳಲಾಗಿದೆ. ನೀಚ ತಂದೆಯೋರ್ವ ಏನೂ ಅರಿಯದ ಕಂದಮ್ಮನ ಮೇಲೆ ವಿಕೃತಿ ಮೆರೆದಿರುವುದು ದುರಂತವೇ ಸರಿ.