HomeKarnatakaBIG NEWS : ರಾಜ್ಯದ ಜನತೆ ಗಮನಕ್ಕೆ : ‘ಯಶಸ್ವಿನಿ ಯೋಜನೆ’ ನೋಂದಣಿಗೆ ಮಾ.31 ಕೊನೆಯ...

BIG NEWS : ರಾಜ್ಯದ ಜನತೆ ಗಮನಕ್ಕೆ : ‘ಯಶಸ್ವಿನಿ ಯೋಜನೆ’ ನೋಂದಣಿಗೆ ಮಾ.31 ಕೊನೆಯ ದಿನ.!

ಬೆಂಗಳೂರು : ಸಹಕಾರ ಇಲಾಖೆಯು 2024-25ನೇ ಸಾಲಿಗೆ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದು, ಮಾ.31 ಕೊನೆಯ ದಿನಾಂಕವಾಗಿದೆ.

ಈ ಯೋಜನೆಯಡಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು, ಕಣ್ಣಿನ ಖಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸಹಕಾರಿಗಳಿಗೆ ಒದಗಿಸಲಾಗುವುದು. ಈ ಯೋಜನೆಯಡಿ ಒಂದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿಯು ರೂ. 5.00 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, 1 ಏಪ್ರಿಲ್ 2025 ರಿಂದ 31 ಮಾರ್ಚ್ 2026ರವರೆಗೆ ಚಿಕಿತ್ಸಾ ಅವಧಿ ಚಾಲ್ತಿಯಲ್ಲಿರುತ್ತದೆ.

ಸಹಕಾರ ಇಲಾಖೆಯು 2025–26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಜ.31 ರವರೆಗೆ ಅವಕಾಶ ಕಲ್ಪಿಸಲಾಗಿತ್ತು, ನಂತರ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡುವು ಗಡುವನ್ನು ಮಾ.31 ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಾದ್ಯಂತ ಯಶಸ್ವಿನಿ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿಸೆಂಬರ್-2024 ಮತ್ತು ಜನವರಿ-2025 ರ ತಿಂಗಳುಗಳಲ್ಲಿ ಹೆಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ / ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಇತರೆ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿದ್ದು, ಇಲಾಖೆಯ ಕ್ಷೇತ್ರ ಸಿಬ್ಬಂದಿಗಳು / ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದರಿಂದಾಗಿ ಯಶಸ್ವಿನಿ ನೋಂದಣಿಯಲ್ಲಿ ಹೆಚ್ಚಿನ ಪ್ರಗತಿ ಆಗಿರುವುದಿಲ್ಲವೆಂದು ಹಾಗೂ ನಿಗದಿಪಡಿಸಿರುವ ಗುರಿಯ ಪೈಕಿ ಇಲ್ಲಿಯವರೆಗೆ ಸುಮಾರು 10 ಲಕ್ಷ ಸದಸ್ಯರ ನೋಂದಣಿ ಮಾತ್ರವಾಗಿದ್ದು, ಇನ್ನೂ ಅನೇಕ ಸದಸ್ಯರು ನೋಂದಾಯಿಸಿಕೊಳ್ಳಲು ಆಸಕ್ತರಾಗಿರುವುದರಿಂದ ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಲು 2024-25 ನೇ ಸಾಲಿನ ಯಶಸ್ವಿನಿ ಯೋಜನೆಯಡಿ ಸದಸ್ಯರ ನೋಂದಣಿ/ನವೀಕರಣ ಅವಧಿಯನ್ನು ದಿನಾಂಕ: 01-02-2025 ರಿಂದ ದಿನಾಂಕ: 31-03-2025 ರವರೆಗೆ ವಿಸ್ತರಿಸಲು ನಿಬಂಧಕರು ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2024-25ನೇ ಸಾಲಿನಲ್ಲಿ ಯಶಸ್ವಿನಿ ಯೋಜನೆಯನ್ನು ಮುಂದುವರೆಸಲು ಹಾಗೂ ಈ ಯೋಜನೆಯಲ್ಲಿ ಹೊಸ ಸದಸ್ಯರನ್ನು ನೋಂದಾಯಿಸಲು/ನವೀಕರಣಗೊಳಿಸುವ ಸಲುವಾಗಿ ಅವಧಿಯನ್ನು ದಿನಾಂಕ:01-02-2025 ರಿಂದ ದಿನಾಂಕ:31-03-2025 ರವರೆಗೆ ವಿಸ್ತರಿಸಿ ಆದೇಶಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular