HomeLatest NewsBIG NEWS : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 'IPS' ಅಧಿಕಾರಿಗಳಿಗೆ ಇನ್ಮುಂದೆ ಪೊಲೀಸ್ ಸೇವೆ...

BIG NEWS : ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ‘IPS’ ಅಧಿಕಾರಿಗಳಿಗೆ ಇನ್ಮುಂದೆ ಪೊಲೀಸ್ ಸೇವೆ ಇಲ್ಲ.!

ಬೆಂಗಳೂರು : ಬೆಂಗಳೂರು ಕೆಂಪೇಗೌಡ  ವಿಮಾನ ನಿಲ್ದಾಣದಲ್ಲಿ ಐಪಿಎಸ್ ಅಧಿಕಾರಿಗಳಿಗೆ ಇನ್ಮುಂದೆ ಪೊಲೀಸ್ ಸೇವೆ ಇಲ್ಲ . ಹೌದು, ನಟಿ ರನ್ಯಾ ರಾವ್ ಚಿನ್ನ ಕೇಸ್ ಬೆನ್ನಲ್ಲೇ ಪೊಲೀಸ್ ಸೇವೆಯನ್ನು ಪೊಲೀಸ್ ಆಯುಕ್ತರು ಹಿಂಪಡೆದಿದ್ದಾರೆ.

ಡಿಜಿಪಿ ರಾಮಚಂದ್ರರಾವ್ ಮಲಮಗಳು, ನಟಿ ರನ್ಯಾರಾವ್ ರ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಶಿಷ್ಟಾಚಾರ ದುರ್ಬಳಕೆ ಕಾರಣ ಬೆಂಗಳೂರು ಏರ್ ಪೋರ್ಟ್ ನಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಕಲ್ಪಿಸಲಾಗಿದ್ದ ಪೊಲೀಸ್ ಸೇವೆಯನ್ನು ಆಯುಕ್ತರು ಹಿಂಪಡೆದಿದ್ದಾರೆ.

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಮಾಹಿತಿ ಲಭ್ಯವಾಗುತ್ತಿದೆ. ಸರ್ಕಾರ ರಚಿಸಿದ್ದ ಗೌರವ್ ಗುಪ್ತಾ ನೇತೃತ್ವದ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ.ರನ್ಯಾ ರಾವ್, ಅಕ್ರಮ ಚಿನ್ನ ಸಾಗಾಟ ಕೇಸ್ ನಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಯೇ ಭಾಗಿಯಾಗಿರು ವುದು ಸತ್ಯ ಎಂಬ ಮಾಹಿತಿ ತನಿಖೆಯಲ್ಲಿ ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏರ್ ಪೋರ್ಟ್ ಸಿಬ್ಬಂದಿ ಭಾಗಿಯಾಗಿದ್ದರಿಂದಲೇ ರನ್ಯಾ, ಸುಲಭವಾಗಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಳು ಎನ್ನಲಾಗಿದೆ. ಪ್ರೋಟೋಕಾಲ್ ಸಿಬ್ಬಂದಿ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ಮೂಲಕ ರನ್ಯಾ ಮಲತಂದೆ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರಿಗೂ ಸಂಕಷ್ಟ ಎದುರಾಗಿದೆ. ಈಗಾಗಲೇ ಶಕ್ತಿಭವನದಲ್ಲಿ ರಾಮಚಂದ್ರರಾವ್ ಅವರ ವಿಚಾರಣೆಯನ್ನು ನಡೆಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular