HomeBusinessʼಸ್ವಿಗ್ಗಿ ಇನ್ಸ್ಟಾಮಾರ್ಟ್‌ʼ ನಿಂದ ಅಚ್ಚರಿ ; ತಮಾಷೆಗೆ ಕೇಳಿದ್ದಕ್ಕೆ ಇಡೀ ತಿಂಗಳ ರೇಷನ್ ಫ್ರೀ |...

ʼಸ್ವಿಗ್ಗಿ ಇನ್ಸ್ಟಾಮಾರ್ಟ್‌ʼ ನಿಂದ ಅಚ್ಚರಿ ; ತಮಾಷೆಗೆ ಕೇಳಿದ್ದಕ್ಕೆ ಇಡೀ ತಿಂಗಳ ರೇಷನ್ ಫ್ರೀ | Watch

ಸ್ವಿಗ್ಗಿ ಇನ್ಸ್ಟಾಮಾರ್ಟ್ ಹಾಗೂ ಗ್ರಾಹಕರ ನಡುವೆ ನಡೆದ ತಮಾಷೆಯ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಹಕರೊಬ್ಬರು ತಮಾಷೆಗೆ ಕೇಳಿದ ಪ್ರಶ್ನೆಗೆ ಸ್ವಿಗ್ಗಿ ಇನ್ಸ್ಟಾಮಾರ್ಟ್ ತಿಂಗಳ ರೇಷನ್ ಕಳಿಸಿ ಅಚ್ಚರಿ ಮೂಡಿಸಿದೆ.

ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕ ಗೋಪೇಶ್ ಖೇತಾನ್ ಅವರು, “ಧನಿಯಾ ಏಕೆ ಕಳುಹಿಸುತ್ತೀರಾ, ತಿಂಗಳ ರೇಷನ್ ಕಳಿಸಿ” ಎಂದು ತಮಾಷೆ ಮಾಡಿದ್ದರು. ಇದಕ್ಕೆ ಸ್ವಿಗ್ಗಿ ಇನ್ಸ್ಟಾಮಾರ್ಟ್, “ಏನೇನು ಬೇಕು ಹೇಳಿ, ಕಳಿಸುತ್ತೇವೆ” ಎಂದು ಉತ್ತರ ನೀಡಿತ್ತು.

ಇದನ್ನು ನಂಬದ ಗೋಪೇಶ್ ಖೇತಾನ್, ಆಶ್ಚರ್ಯಚಕಿತರಾದರು. ಆದರೆ, ಕೆಲವೇ ಹೊತ್ತಿನಲ್ಲಿ ಸ್ವಿಗ್ಗಿ ಇನ್ಸ್ಟಾಮಾರ್ಟ್ ತಿಂಗಳ ರೇಷನ್ ಕಳಿಸಿತ್ತು. ಇದರಿಂದ ಆಶ್ಚರ್ಯಚಕಿತರಾದ ಗೋಪೇಶ್ ಖೇತಾನ್, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಿಗ್ಗಿ ಇನ್ಸ್ಟಾಮಾರ್ಟ್ ಕಳಿಸಿದ ರೇಷನ್‌ನಲ್ಲಿ ನೂಡಲ್ಸ್, ಬ್ರೆಡ್, ನಾಚೋಸ್ ಹಾಗೂ ರೂಹ್ ಅಫ್ಜಾ ಬಾಟಲ್ ಕೂಡ ಇತ್ತು. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular