HomeIndia7 ವರ್ಷದ ಮಗುವಿನ ಹಾಡಿಗೆ ಅಮಿತ್ ಶಾ ಫಿದಾ ; ಗಿಟಾರ್‌ ಗಿಫ್ಟ್‌ | Watch...

7 ವರ್ಷದ ಮಗುವಿನ ಹಾಡಿಗೆ ಅಮಿತ್ ಶಾ ಫಿದಾ ; ಗಿಟಾರ್‌ ಗಿಫ್ಟ್‌ | Watch Video

ಮಿಜೋರಾಂನ 7 ವರ್ಷದ ಎಸ್ತರ್ ಲಾಲ್ದುಹಾವ್ಮಿ ಹ್ನಾಮ್ಟೆ ಅನ್ನೋ ಮಗು ʼವಂದೇ ಮಾತರಂʼ ಹಾಡಿ ಅಮಿತ್ ಶಾರನ್ನೇ ಬೆರಗಾಗಿಸಿದ್ದಾಳೆ. ಅಮಿತ್ ಶಾ ಮಿಜೋರಾಂಗೆ ಹೋದಾಗ ನಡೆದ ಕಾರ್ಯಕ್ರಮದಲ್ಲಿ ಈ ಮಗು ವಂದೇ ಮಾತರಂ ಹಾಡಿದೆ. ಆ ಹಾಡನ್ನ ಕೇಳಿ ಅಮಿತ್ ಶಾ ಫಿದಾ ಆಗಿದ್ದಾರೆ.

ಆ ಮಗು ಹಾಡಿದ ವಿಡಿಯೋವನ್ನ ಅಮಿತ್ ಶಾ ತಮ್ಮ X ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ಭಾರತದ ಮೇಲಿನ ಪ್ರೀತಿ ನಮ್ಮೆಲ್ಲರನ್ನು ಒಂದುಗೂಡಿಸುತ್ತದೆ. ಮಿಜೋರಾಂನ ಅದ್ಭುತ ಮಗು ಎಸ್ತರ್ ಲಾಲ್ದುಹಾವ್ಮಿ ಹ್ನಾಮ್ಟೆ ಅವರು ಇಂದು ಐಜ್ವಾಲ್‌ನಲ್ಲಿ ವಂದೇ ಮಾತರಂ ಹಾಡುತ್ತಿರುವುದನ್ನು ಕೇಳಿ ತುಂಬಾ ಸಂತೋಷವಾಯಿತು. ಏಳು ವರ್ಷದ ಬಾಲಕಿಯ ಭಾರತ ಮಾತೆಯ ಮೇಲಿನ ಪ್ರೀತಿ ಆಕೆಯ ಹಾಡಿನಲ್ಲಿ ವ್ಯಕ್ತವಾಗಿದೆ, ಆಕೆಯ ಹಾಡು ಕೇಳುವುದು ಒಂದು ಮೋಡಿಮಾಡುವ ಅನುಭವವಾಗಿದೆ” ಅಂತ ಅಮಿತ್ ಶಾ ಬರೆದಿದ್ದಾರೆ.

ಅಷ್ಟೇ ಅಲ್ಲ, ಆ ಮಗುವಿಗೆ ಗಿಟಾರ್ ಗಿಫ್ಟ್ ಕೊಟ್ಟಿದ್ದಾರೆ. ಆ ಮಗು ತುಂಬಾ ಚೆನ್ನಾಗಿ ಹಾಡುತ್ತೆ, 2020 ರಲ್ಲಿ ‘ಮಾ ತುಝೆ ಸಲಾಂ’ ಹಾಡಿ ಫೇಮಸ್ ಆಗಿತ್ತು. ಮಿಜೋರಾಂ ಸರ್ಕಾರ ಕೂಡ ಆ ಮಗುವಿಗೆ ತುಂಬಾ ಪ್ರಶಸ್ತಿಗಳನ್ನ ಕೊಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಮಿತ್ ಶಾ ಅಸ್ಸಾಂಗೆ ಹೋಗಿದ್ದಾಗ ಮಿಜೋರಾಂಗೆ ಕೂಡ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಅಸ್ಸಾಂ ರೈಫಲ್ಸ್ ಭೂಮಿ ವರ್ಗಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಆ ಕಾರ್ಯಕ್ರಮದಲ್ಲಿ ಅಮಿತ್ ಶಾ, ಅಸ್ಸಾಂ ರೈಫಲ್ಸ್ ಪ್ರಧಾನ ಕಛೇರಿಯನ್ನು ಸೆಂಟ್ರಲ್ ಐಜ್ವಾಲ್‌ನಿಂದ ಝೋಖಾವ್ಸಾಂಗ್‌ಗೆ ಸ್ಥಳಾಂತರಿಸುವುದು ಮಿಜೋರಾಂ ಅಭಿವೃದ್ಧಿಗೆ ಭಾರತ ಸರ್ಕಾರದ ಬದ್ಧತೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಅಂತ ಹೇಳಿದ್ರು. 30-35 ವರ್ಷಗಳಿಂದ ಇದ್ದ ಈ ಬೇಡಿಕೆಯನ್ನ ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದ್ದಾರೆ ಅಂತ ಹೇಳಿದ್ರು.

 

For Latest News Updates, Join Our Whatsapp Community🚩
RELATED ARTICLES

Most Popular