HomeCrimeಕ್ಷುಲ್ಲಕ ಕಾರಣಕ್ಕೆ ವೃದ್ಧನ ಕೊಲೆ: ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ | Watch

ಕ್ಷುಲ್ಲಕ ಕಾರಣಕ್ಕೆ ವೃದ್ಧನ ಕೊಲೆ: ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ | Watch

ಹೈದರಾಬಾದ್‌ನ ಕಂಚನ್‌ಬಾಗ್‌ನ ಬಾಬಾ ನಗರದಲ್ಲಿ ಬುಧವಾರ ರಾತ್ರಿ ನಡೆದ ಆಘಾತಕಾರಿ ಘಟನೆಯಲ್ಲಿ, ದಿನಸಿ ಅಂಗಡಿ ನಡೆಸುತ್ತಿದ್ದ ವೃದ್ಧರೊಬ್ಬರನ್ನು ಯುವಕರ ಗುಂಪೊಂದು ಸಣ್ಣ ವಿಚಾರಕ್ಕೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಮಾಡಿದೆ.

ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹಲ್ಲೆಯ ವಿಡಿಯೋ ವೈರಲ್ ಆಗಿದೆ. ವರದಿಗಳ ಪ್ರಕಾರ, ಬಾಬಾ ನಗರದ ‘ಸಿ ಬ್ಲಾಕ್’ ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ 62 ವರ್ಷದ ಜಾಕಿರ್ ಖಾನ್, ಪಾನ್ ಅಂಗಡಿ ಮಾಲೀಕರೊಬ್ಬರ ಗ್ರಾಹಕರು ತಮ್ಮ ಅಂಗಡಿ ಮುಂದೆ ಕುರ್ಚಿಗಳನ್ನು ಹಾಕಿ ಕುಳಿತಿದ್ದರಿಂದ ಜಗಳವಾಡಿದ್ದಾರೆ.

ಇದನ್ನು ವಿರೋಧಿಸಿದ ಜಾಕಿರ್ ಖಾನ್, ಕುರ್ಚಿಗಳನ್ನು ತೆಗೆಯುವಂತೆ ಕೇಳಿದಾಗ, ಯುವಕರ ಗುಂಪೊಂದು ಅವರಿಗೆ ಥಳಿಸಿ, ಮುಖ ಮತ್ತು ಎದೆಗೆ ಪಂಚ್ ಮಾಡಿ, ಕೆಳಗೆ ತಳ್ಳಿದೆ. ಜಾಕಿರ್ ಗಾಯಗೊಂಡು ಸಾವನ್ನಪ್ಪಿದ್ದಾರೆ. 2016 ರಲ್ಲಿ ಜಾಕಿರ್ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು ಎಂದು ವರದಿಗಳು ತಿಳಿಸಿವೆ. ಅವರ ಇಬ್ಬರು ಪುತ್ರರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular