HomeIndiaBIG NEWS: ಉಚಿತ ಆರೋಗ್ಯ ಸೌಲಭ್ಯದ ಆಯುಷ್ಮಾನ್ ವಿಮೆ ಯೋಜನೆ ವಯೋಮಿತಿ ಇಳಿಕೆ, 10 ಲಕ್ಷದವರೆಗೆ...

BIG NEWS: ಉಚಿತ ಆರೋಗ್ಯ ಸೌಲಭ್ಯದ ಆಯುಷ್ಮಾನ್ ವಿಮೆ ಯೋಜನೆ ವಯೋಮಿತಿ ಇಳಿಕೆ, 10 ಲಕ್ಷದವರೆಗೆ ಫ್ರೀ ಚಿಕಿತ್ಸೆಗೆ ಶಿಫಾರಸು

ನವದೆಹಲಿ: ಆಯುಷ್ಮಾನ್ ವಿಮೆ ಸೇರ್ಪಡೆ ಮಿತಿ 60 ವರ್ಷಕ್ಕೆ ಇಳಿಕೆ, ಚಿಕಿತ್ಸಾ ವೆಚ್ಚ 10 ಲಕ್ಷ ರೂ.ಗೆ ಏರಿಕೆ ಮಾಡಲು ಶಿಫಾರಸು ಮಾಡಲಾಗಿದೆ.

70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸುವ ಆಯುಷ್ಮಾನ್ ವಯಾ ವಂದನಾ ಕಾರ್ಡ್ ಸೇರ್ಪಡೆ ವಯೋಮಿತಿಯನ್ನು 60 ವರ್ಷಕ್ಕೆ ಇಳಿಕೆ ಮಾಡಬೇಕು ಎಂದು ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ರಾಜ್ಯಸಭೆಯಲ್ಲಿ ಈ ಬಗ್ಗೆ ವರದಿ ಮಂಡಿಸಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಪ್ರಸ್ತುತ ಇರುವ ಚಿಕಿತ್ಸೆ ವೆಚ್ಚ 5 ಲಕ್ಷ ರೂ.ಗಳಿಂದ 10 ಲಕ್ಷ ರೂಪಾಯಿಗೆ ಪರಿಷ್ಕರಿಸಬೇಕೆಂದು ಶಿಫಾರಸು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರೊಂದಿಗೆ ಜನರ ಹಿತ ದೃಷ್ಟಿಯಿಂದ ಯೋಜನೆಯ ವ್ಯಾಪ್ತಿ ವಿಸ್ತರಿಸಲು ಆಯುಷ್ಮಾನ್ ಕಾರ್ಡ್ ಗಳಿಗೆ 70 ವರ್ಷದಿಂದ 60 ವರ್ಷಕ್ಕೆ ಇಳಿಕೆ ಮಾಡಬೇಕೆಂದು ಹೇಳಲಾಗಿದೆ. ಸರ್ಕಾರ ಆಯುಷ್ಮಾನ್ ಯೋಜನೆ ಅಡಿ 4.5 ಕೋಟಿ ಕುಟುಂಬಗಳ 70 ವರ್ಷ ಮತ್ತು ಮೇಲ್ಪಟ್ಟ 6 ಕೋಟಿ ನಾಗರಿಕರಿಗೆ ಉಚಿತ ಆರೋಗ್ಯ ಸೇವೆ ನೀಡುವ ಯೋಜನೆ ಘೋಷಿಸಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular