HomeKarnatakaSHOCKING : ಚಿಕ್ಕಬಳ್ಳಾಪುರದಲ್ಲಿ ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವು, ತಾಯಿಗೆ...

SHOCKING : ಚಿಕ್ಕಬಳ್ಳಾಪುರದಲ್ಲಿ ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಸಾವು, ತಾಯಿಗೆ ಗಂಭೀರ ಗಾಯ.!

ಚಿಕ್ಕಬಳ್ಳಾಪುರ : ತೆಂಗಿನ ಮರ ಮುರಿದು ಬಿದ್ದು 3 ವರ್ಷದ ಮಗು ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಪ್ರಥ್ವಿಗರಾಜ್ (3) ಎಂದು ಗುರುತಿಸಲಾಗಿದೆ . ಗರ್ಭಿಣಿ ತಾಯಿ ಮೋನಿಕಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೋನಿಕಾ ತನ್ನ ತವರು ಮನೆ ಹಾಲಗಾನಹಳ್ಳಿಗೆ ಬಂದಿದ್ದಾಗ ಈ ಘಟನೆ ನಡೆದಿದೆ.

ನಿನ್ನೆ ಭಾನುವಾರ ಮನೆಯ ಮುಂದೆ ಇದ್ದ ತೆಂಗಿನ ಮರ ಮುರಿದು ಬಿದ್ದಿದ್ದು, ಮಗು ಮೃತಪಟ್ಟಿದೆ. , ತಾಯಿಯನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular