BREAKING NEWS: ಮಹಾ ಕುಂಭಮೇಳಕ್ಕೆ ತೆರಳಿರುವ ಬೆಳಗಾವಿಯ 5 ಜನ ನಾಪತ್ತೆ!

ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಬೆಳಗಾವಿಯಿಂದ 30 ಜನರು ತೆರಳಿದ್ದು ಅವರಲ್ಲಿ ಐವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದು, ಇಂದು ಮೌನಿ ಅಮವಾಸ್ಯೆ ಹಿನ್ನೆಲೆಯಲ್ಲಿ ಕುಂಭಮೇಳದಲ್ಲಿ ಶಾಹಿ ಸ್ನಾನಕ್ಕೆಂದು 10 ಕೋಟಿಗೂ ಅಧಿಕ ಭಕ್ತರು ತೆರಳುವ ಮಾಹಿತಿ ಇದೆ. ಬೆಳಗಾವಿಯಿಂದ 30 ಜನರು ಟ್ರ್ಯಾವೆಲ್ ಏಜೆನ್ಸಿ ಮೂಲಕ ತೆರಳಿದ್ದು, ಕಾಲ್ತುಳಿತ ಘಟನೆ ಬಳಿಕ ಐವರು ನಾಪತ್ತೆಯಾಗಿದ್ದಾರೆ. ಐವರ ಪತ್ತೆಗಾಗಿ ಪ್ರಯಾಗ್ ರಾಜ್ ಜಿಲ್ಲಾಡಳಿತದ ಜೊತೆಗೂ ಸಂಪರ್ಕದಲ್ಲಿದ್ದೇವೆ ಎಂದರು.

ಈವರೆಗೂ ಯಾರೂ ದೂರು ನೀಡಿಲ್ಲ. ಆದರೆ ಟ್ರ್ಯಾವೆಲ್ ಏಜೆನ್ಸಿಯಿಂದ ಹೋದ ಐವರು ಎಲ್ಲಿಯೂ ಕಾಣಸಿಗುತ್ತಿಲ್ಲ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಕುಟುಂಬದವರು ಆತಂಕಕ್ಕೀಡಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ಅಲ್ಲಿನ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಎಂದರು.

ನಾಪತ್ತೆಯಾದವರ ಕುಟುಂಬಗಳು ಜಿಲ್ಲಾದಿಕಾರಿ ಕಚೇರಿಗೆ ಭೇಟಿ ನೀಡಬಹುದು. ವಾಹನಗಳ ಸಮಸ್ಯೆ ಇದ್ದರೆ ನಾವೇ ಸೂಕ್ತ ವ್ಯವಸ್ಥೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಪ್ರಯಾಗ್ ರಾಜ್ ಗೆ ತೆರಳುವವರಿಗೆ ಗೈಡ್ ಲೈನ್ಸ್ ನೀಡುತ್ತೇವೆ ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read