HomeKarnatakaSHOCKING NEWS: ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ದುರಂತ: ವ್ಯಕ್ತಿ ಸ್ಥಳದಲ್ಲೇ ಸಾವು

SHOCKING NEWS: ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ದುರಂತ: ವ್ಯಕ್ತಿ ಸ್ಥಳದಲ್ಲೇ ಸಾವು

ಮಡಿಕೇರಿ: ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ.

ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಮೃತ ದುರ್ದೈವಿ. ಒಂಟಿ ನಳಿಗೆ ಬಂದೂಕಿನಿಂದ ಗುಂಡು ಹಾರಿ ಈ ದುರಂತ ಸಂಭವಿಸಿದೆ.

ಬಂದೂಕು ಕೆಳಗೆ ಬಿದ್ದ ಪರಿಣಾಮ ಗುಂಡು ಹಾರಿರಬಹುದು ಅದು ವ್ಯಕ್ತಿಗೆ ತಗುಲಿ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತ ಚಂಗಪ್ಪ ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ನಡೆಸುತ್ತಿದ್ದರು. ವೈನ್ ಶಾಪ್ ಎದುರಲ್ಲೇ ಈ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular