HomeKarnatakaಡಿಸಿಎಂ ಡಿಕೆ ಇಲ್ಲವೆಂದು ಊಟಕ್ಕೆ ಕರೆಯಲೇಬಾರದಾ..? ಅವರು ಕಂಪ್ಲೆಂಟ್ ಮಾಡಿದ್ದಾರಾ…?: ಸಚಿವ ಜಾರ್ಜ್ ಪ್ರಶ್ನೆ

ಡಿಸಿಎಂ ಡಿಕೆ ಇಲ್ಲವೆಂದು ಊಟಕ್ಕೆ ಕರೆಯಲೇಬಾರದಾ..? ಅವರು ಕಂಪ್ಲೆಂಟ್ ಮಾಡಿದ್ದಾರಾ…?: ಸಚಿವ ಜಾರ್ಜ್ ಪ್ರಶ್ನೆ

ರಾಮನಗರ: ಡಿನ್ನರ್ ಮೀಟಿಂಗ್ ಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.

ಏಕೆ ಡಿನ್ನರ್ ಕೊಡಬಾರದೇ? ಅದು ಅವರ ವೈಯಕ್ತಿಕ, ನಾನೂ ನಾಲ್ವರನ್ನು ಊಟಕ್ಕೆ ಕರೆಯುತ್ತೇನೆ. ಅವರು ಬರುತ್ತಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಉಪಮುಖ್ಯಮಂತ್ರಿ ಇಲ್ಲವೆಂದು ಊಟಕ್ಕೆ ಕರೆಯಲೇಬಾರದಾ ಎಂದು ಪ್ರಶ್ನಿಸಿದ್ದಾರೆ.

ಉಪಮುಖ್ಯಮಂತ್ರಿ ಇದ್ದಾಗಲೂ ಊಟಕ್ಕೆ ಕರೆದಿದ್ದೇವೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಕಂಪ್ಲೇಂಟ್ ಮಾಡಿದ್ದಾರಾ? ಅಧ್ಯಕ್ಷರನ್ನು ನೇಮಕ ಮಾಡೋದು, ಬದಲಿಸುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಅದರ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಬಿಡದಿಯಲ್ಲಿ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular