HomeKarnatakaBREAKING NEWS: ಚಿನ್ನದಂಗಡಿ ಮಾಲಕಿಗೆ ವಂಚನೆ ಪ್ರಕರಣ: ಆರೋಪಿ ಐಶ್ವರ್ಯಾ ಗೌಡ, ಪತಿ ಹರೀಶ್ ಅರೆಸ್ಟ್

BREAKING NEWS: ಚಿನ್ನದಂಗಡಿ ಮಾಲಕಿಗೆ ವಂಚನೆ ಪ್ರಕರಣ: ಆರೋಪಿ ಐಶ್ವರ್ಯಾ ಗೌಡ, ಪತಿ ಹರೀಶ್ ಅರೆಸ್ಟ್

ಬೆಂಗಳೂರು: ಚಿನ್ನದಂಗಡಿ ಮಾಲಕಿ ವನಿತಾ ಐತಾಳ್ ಅವರಿಗೆ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ವರಾಹಿ ವರ್ಲ್ಡ್ ಜ್ಯುವೆಲ್ಲರಿ ಅಂಗಡಿ ಮಾಲಕಿ ವನಿತಾ ಐತಾಳ್ ಅವರಿಗೆ ಐಶ್ವರ್ಯಾ ಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು 9 ಲಕ್ಷ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೇ ನಟ ಧರ್ಮೇಂದ್ರ ಡಿ.ಕೆ.ಸುರೇಶ್ ಧ್ವನಿಯಲ್ಲಿ ಕರೆ ಮಾಡಿ ನಂಬಿಸಿದ್ದ ಬಗ್ಗೆಯೂ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ವನಿತಾ ಐತಾಳ್ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಐಶ್ವರ್ಯಾ, ಆಕೆಯ ಪತಿ ಹರೀಶ್ ಗೌಡ, ನಟ ಧರ್ಮೇಂದ್ರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಇಂದು ವಿಚಾರಣೆಗೆಂದು ಕರೆದ ಚಂದ್ರಾ ಲೌಟ್ ಠಾಣೆ ಪೊಲೀಸರು, ವಿಚಾರಣೆ ಬಳಿಕ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡ ಇಬ್ಬರನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular