HomeKarnatakaBREAKING NEWS: ನೀರಿಗೆ ಬಿದ್ದ ಮಗು ಉಳಿಸಲು ಹೋಗಿ ತಾಯಿ ಸೇರಿ ಮೂವರು ಜಲಸಮಾಧಿ

BREAKING NEWS: ನೀರಿಗೆ ಬಿದ್ದ ಮಗು ಉಳಿಸಲು ಹೋಗಿ ತಾಯಿ ಸೇರಿ ಮೂವರು ಜಲಸಮಾಧಿ

ಚಿಕ್ಕಬಳ್ಳಾಪುರ: ನೀರಿಗೆ ಜಾರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿ ಸೇರಿದಂತೆ ಮೂವರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.

ಫರಿನಾ ಬೇಗಂ, ಇಮ್ರಾನ್ ಹಾಗೂ ಬಶೀರ್ ಮೃತ ದುರ್ದೈವಿಗಳು. ಫರಿನಾ ಬೇಗಂ ಅವರ ಮಗು ಆಕಸ್ಮಿಕವಾಗಿ ಜಾರಿ ನೀರಿಗೆ ಬಿದ್ದಿತ್ತು. ಮಗುವನ್ನು ರಕ್ಷಿಸಲೆಂದು ತಾಯಿ ಫರಿನಾ ಬೇಗಂ, ಜಲಾಶಯದ ನೀರಿಗೆ ಇಳಿದಿದ್ದಾರೆ. ಹೀಗೆ ಒಬ್ಬರನ್ನು ರಕ್ಷಿಸಲು ಮತ್ತೊಬ್ಬರು ಹೋಗಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ನೀರಿಗೆ ಬಿದ್ದ ಮಗುವನ್ನು ರಕ್ಷಿಸಲಾಗಿದೆ. ಈ ವೇಳೆ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular