HomeKarnatakaBIG NEWS: ಹನಿಟ್ರ್ಯಾಪ್ ಪ್ರಕರಣ: ಸಚಿವರು ದೂರು ನೀಡದೇ ತನಿಖೆ ನಡೆಸಲು ಆಗಲ್ಲ: ಗೃಹ ಸಚಿವ...

BIG NEWS: ಹನಿಟ್ರ್ಯಾಪ್ ಪ್ರಕರಣ: ಸಚಿವರು ದೂರು ನೀಡದೇ ತನಿಖೆ ನಡೆಸಲು ಆಗಲ್ಲ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಆಗದೇ ತನಿಖೆಗೆ ಕೊಡಲು ಆಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಇಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಸಚಿವ ಕೆ.ಎನ್.ರಾಜಣ್ಣ ದೂರು ನೀಡದೇ ನಾನೇನು ಮಾಡಲಿ? ಅವರು ದೂರು ನೀಡಲಿ. ಎಫ್ಐಆರ್ ಆಗದೇ ತನಿಖೆಗೆ ಕೊಡಲು ಆಗಲ್ಲ ಎಂದರು.

ರಾಜಣ್ಣ ಏನು ಮಾಡುತ್ತಾರೆ ನೋಡೋಣ. ರಾಜಣ್ಣ ಅವರಿಗೆ ಬಹಳ ಜನ ಆಪ್ತರಿದ್ದಾರೆ. ಅವರು ಯಾರ ಜೊತೆ ಯಾವ ರೀತಿ ಮಾತನಾಡುತ್ತಾರೆ ನನಗೇನು ಗೊತ್ತು? ರಾಜಣ್ಣ ದಿನವಿಡಿ ನನ್ನ ಜೊತೆಯೇ ಇದ್ದರೂ ಈ ಬಗ್ಗೆ ಏನೂ ಹೇಳಿಲ್ಲ. ಅವರಿಗೆ ನನ್ನನ್ನೂ ಸೇರಿದಂತೆ ಬಹಳ ಜ ಆಪ್ತರಿದ್ದಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular