ಭಾರತದಲ್ಲಿ ಕಸ ಎಸೆಯುವುದು ದುರದೃಷ್ಟವಶಾತ್ ಅನೇಕರಿಗೆ ಸಾಮಾನ್ಯ ಸ್ವಭಾವವಾಗಿದೆ. ರಸ್ತೆ, ರೈಲ್ವೆ ಹಳಿ, ಕಡಲತೀರ ಮತ್ತು ಜಲಮೂಲಗಳಿಗೆ ನಿರ್ಲಕ್ಷ್ಯದಿಂದ ಕಸವನ್ನು ಎಸೆಯಲಾಗುತ್ತದೆ. ಆದರೆ, ಇದೀಗ ವಿದೇಶಿಗರ ಸ್ವಚ್ಛತಾ ಕಾರ್ಯವು ಭಾರತೀಯರಲ್ಲಿ ಜಾಗೃತಿ ಮೂಡಿಸುತ್ತಿದೆ.
ಇತ್ತೀಚೆಗೆ, ಇಬ್ಬರು ಡ್ಯಾನಿಶ್ ಪ್ರವಾಸಿಗರು ಉತ್ತರ ಸಿಕ್ಕಿಂನ ಯುಮ್ಥಾಂಗ್ ಕಣಿವೆಗೆ ಪ್ರಯಾಣಿಸುವಾಗ ರಸ್ತೆಯುದ್ದಕ್ಕೂ ಕಸವನ್ನು ಹೆಕ್ಕುತ್ತಿರುವುದು ಕಂಡುಬಂದಿದೆ. ಅವರ ಈ ಕಾರ್ಯವು ಸ್ಥಳೀಯರು ಮತ್ತು ಸಹ ಪ್ರಯಾಣಿಕರಿಗೆ ಸ್ಫೂರ್ತಿ ನೀಡಿದೆ. ದಿ ತತ್ವ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಅವರ ಪ್ರಯತ್ನಗಳ ವೀಡಿಯೋ ವೈರಲ್ ಆಗಿದೆ.
ಅದೇ ರೀತಿ, 38 ವರ್ಷದ ಜಪಾನಿನ ಮಹಿಳೆ ಅಕಿ ಡೊಯಿ ಅವರು ಪುರಿ ಬೀಚ್ ಅನ್ನು ಕಸ ಮುಕ್ತಗೊಳಿಸಲು ನಿರ್ಧರಿಸಿದ್ದಾರೆ. ಅವರು ತಮ್ಮ ಬೆಳಿಗ್ಗೆಯನ್ನು ಸ್ವಚ್ಛಗೊಳಿಸಲು ಮೀಸಲಿಡುತ್ತಾರೆ. ಡೊಯಿ ಅವರು ಏಕಾಂಗಿಯಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
View this post on Instagram