ನೋಯ್ಡಾದ ಸೆಕ್ಟರ್ 16 ಕಾರ್ ಮಾರ್ಕೆಟ್‌ನಲ್ಲಿ ಸೋಮವಾರ ವಿಚಿತ್ರ ಘಟನೆಯೊಂದು ನಡೆದಿದೆ. ಕಪ್ಪು ಬಣ್ಣದ ‘ಥಾರ್’ ಕಾರು ತಪ್ಪು ದಾರಿಯಲ್ಲಿ ಬಂದು ನಿಲ್ಲಿಸಿದ್ದ ಗಾಡಿಗಳಿಗೆ ಡಿಕ್ಕಿ ಹೊಡೆದು, ಅಲ್ಲಿಂದ ವೇಗವಾಗಿ ಪರಾರಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ‘ಥಾರ್’ ಕಾರು ಸಣ್ಣ ರಸ್ತೆಯ ತಪ್ಪು ದಾರಿಯಲ್ಲಿ ವೇಗವಾಗಿ ಬರುವುದನ್ನ ಕಾಣಬಹುದು. ಕಾರು ಬರುವಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಅಲ್ಲಿ ನಿಂತಿದ್ದ ಜನರು ಭಯದಿಂದ ಓಡಿ ಹೋಗಿದ್ದಾರೆ. ‘ಥಾರ್’ ಕಾರು ಒಂದು ಬೋರ್ಡ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅದು ಕೆಳಗೆ ಬಿದ್ದಿದೆ. ನಂತರ ಕಾರು ವೇಗವಾಗಿ ಅಲ್ಲಿಂದ ಪರಾರಿಯಾಗಿದೆ. ಈಗ ಪೊಲೀಸರು ಆ ಕಾರಿನ ಚಾಲಕನನ್ನ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
#WATCH | नोएडा में थार चालक की रैश ड्राइविंग, कई बाइक और कार में मारी टक्कर@romanaisarkhan | https://t.co/smwhXUROiK#Noida #RashDriving #RoadAccident pic.twitter.com/fueQEDmrtZ
— ABP News (@ABPNews) March 12, 2025