
ಒಟ್ಟಾವ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆಯಾಗುವ ಸಾಧ್ಯತೆ ಇದೆ. ಜಸ್ಟಿನ್ ಟ್ರುಡೋ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಲಿಬರಲ್ ಪಕ್ಷದ ನಾಯಕನಾಗಿ ಮಾರ್ಕ್ ಕಾರ್ನಿ ಆಯ್ಕೆಯಾಗಿದ್ದಾರೆ.
ಕೆನಡಾ ಕೇಂದ್ರೀಯ ಬ್ಯಾಂಕ್ ಮಾಜಿ ಗವರ್ನರ್ ಆಗಿರುವ ಮಾರ್ಕ್ ಕಾರ್ನಿ ಅವರು ಶಾಸಕಾಂಗ ಅಥವಾ ಕ್ಯಾಬಿನೆಟ್ ಕ್ಷೇತ್ರದಲ್ಲಿ ಅನುಭವ ಹೊಂದಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟೀಕಾಕಾರರಾಗಿರುವ ಮಾರ್ಕ್ಸ್ ಕಾರ್ನಿ, ಕೆನಡಾ ವನ್ನು ಅಮೆರಿಕ ಪ್ರಾಂತ್ಯ ಎಂದು ಕರೆದಿದ್ದ ಟ್ರಂಪ್ ಅವರನ್ನು ಹ್ಯಾರಿ ಪಾಟರ್ ಸರಣಿಯ ಖಳನಾಯಕನಿಗೆ ಹೋಲಿಕೆ ಮಾಡಿ ಟೀಕಿಸಿದ್ದರು. ಇದೀಗ ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಆಯ್ಕೆಯಾಗುವ ಸಾಧ್ಯತೆ ಇದೆ.
ಜಸ್ಟಿನ್ ಟ್ರುಡೊ ಅವರ ಸ್ಥಾನವನ್ನು 59 ವರ್ಷದ ಕಾರ್ನಿ ವಹಿಸಿಕೊಂಡಿದ್ದಾರೆ. ಕಾರ್ನಿ 85.9% ಮತಗಳನ್ನು ಗಳಿಸುವ ಮೂಲಕ ಭಾರಿ ಬಹುಮತದಿಂದ ಗೆದ್ದರು.