HomeKarnatakaBIG NEWS: ಜಿಲೆಟಿನ್ ಕಡ್ಡಿ ಸ್ಫೋಟ: 15ಕ್ಕೂ ಹೆಚ್ಚು ಮನೆಗಳಿಗೆ ಹಾನಿ

BIG NEWS: ಜಿಲೆಟಿನ್ ಕಡ್ಡಿ ಸ್ಫೋಟ: 15ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಬಂಟ್ವಾಳ: ಕಲ್ಲು ಒಡೆಯಲೆಂದು ತಂಡಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ಬಿಸಿಲ ಝಳಕ್ಕೆ ಸ್ಫೋಟಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲಮೂಡ್ನೂರು ಗ್ರಾಮದಲ್ಲಿ ನಡೆದಿದೆ.

ಕ್ವಾರಿಯಲ್ಲಿ ಕಲ್ಲು ಒಡೆಯಲೆಂದು ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತ್ತು. ರಣಬಿಸಿಲಿನಿಂದ ಜಿಲೆಟಿನ್ ಕಡ್ಡಿಗಳು ಏಕಾಏಕಿ ಸ್ಫೋಟಗೊಂಡಿವೆ. ಪರಿಣಾಮ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ.

ಕಲ್ಲುಬಂಡೆ ಒಡೆಯಲೆಂಡು ಬಾಕ್ಸ್ ನಲ್ಲಿ ಜಿಲೆಟಿನ್ ಕಡ್ಡಿಗಳನ್ನು ತಂದಿಡಲಾಗಿತ್ತು. ಬಿಸಿಲ ತೀವ್ರತೆಗೆ ಜಿಲೆಟಿನ್ ಕಡ್ಡಿಗಳು ಬ್ಲಾಸ್ಟ್ ಆಗಿವೆ. ಸುಮಾರು 4 ಕಿ.ಮೀ ವ್ಯಾಪ್ತಿಯಲ್ಲಿದ್ದ ಮನೆಗಳು ಹಾನಿಯಾಗಿದ್ದು, ಗೋಡೆಗಳಲ್ಲಿ ಬಿರುಕು ಬಿಟ್ಟಿವೆ. ಕಿಟಕಿ, ಛಾವಣಿಗಳು ಹಾನಿಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ ಪಿ ಯತೀಶ್ ಕುಮಾರ್ ಸೂಚನೆ ಮೇರೆಗೆ ಕ್ವಾರಿ ಮ್ಯಾನೇಜರ್ ನನ್ನು ವಿಟ್ಲ ಪೊಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular