2024 ರಲ್ಲಿ ನಡೆದ ಫ್ರೀ ಹಗ್ ಕಾರ್ಯಕ್ರಮದಲ್ಲಿ ಕೆ-ಪಾಪ್ ಗುಂಪು ಬಿಟಿಎಸ್‌ನ ಸದಸ್ಯ ಜಿನ್‌ಗೆ ಒಪ್ಪಿಗೆಯಿಲ್ಲದೆ ಕಿಸ್ ಮಾಡಿದ ಆರೋಪದ ಮೇಲೆ ಜಪಾನ್ ಮಹಿಳೆಗೆ ದಕ್ಷಿಣ ಕೊರಿಯಾ ಪೊಲೀಸರು ಸಮನ್ಸ್ ನೀಡಿದ್ದಾರೆ. ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳೆಯನ್ನು ಸಿಯೋಲ್‌ನ ಸಾಂಗ್ಪಾ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿದೆ.
ಆನ್‌ಲೈನ್ ದೂರಿನ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಠಾಣೆ ತಿಳಿಸಿದೆ. ಜಪಾನ್ ಅಧಿಕಾರಿಗಳ ಸಹಾಯದಿಂದ ಮಹಿಳೆಯನ್ನು ಗುರುತಿಸಲಾಗಿದೆ. 50 ರ ಹರೆಯದವರು ಎಂದು ನಂಬಲಾದ ಮಹಿಳೆ ವಿಚಾರಣೆಗೆ ಸಹಕರಿಸಲು ನಿರಾಕರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸುಮಾರು 1,000 ಮಂದಿ ಭಾಗವಹಿಸಿದ್ದ ಸಭೆಯಲ್ಲಿ ಮಹಿಳೆಯೊಬ್ಬರು ಜಿನ್‌ನ ಕೆನ್ನೆಗೆ ಅನಿರೀಕ್ಷಿತವಾಗಿ ಕಿಸ್ ಮಾಡಿದ್ದಾರೆ. ಜಿನ್ ಸ್ಪಷ್ಟವಾಗಿ ಮುಜುಗರಕ್ಕೊಳಗಾಗುತ್ತಿರುವುದು ವೈರಲ್ ವಿಡಿಯೋ ತುಣುಕಿನಲ್ಲಿ ಸೆರೆಯಾಗಿದೆ. ಮಹಿಳೆ ನಂತರ ಆನ್‌ಲೈನ್ ಬ್ಲಾಗ್ ಪೋಸ್ಟ್‌ನಲ್ಲಿ, “ನನ್ನ ತುಟಿಗಳು ಅವನ ಕತ್ತನ್ನು ಸ್ಪರ್ಶಿಸಿದವು. ಅವನ ಚರ್ಮವು ತುಂಬಾ ಮೃದುವಾಗಿತ್ತು” ಎಂದು ಬರೆದಿದ್ದಾಳೆ.
ಜೂನ್ 2024 ರಲ್ಲಿ 18 ತಿಂಗಳ ಕಡ್ಡಾಯ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದ ಒಂದು ದಿನದ ನಂತರ, ಕಿಮ್ ಸಿಯೋಕ್-ಜಿನ್ ಎಂಬ ಹೆಸರಿನ ಜಿನ್ ಸಿಯೋಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳಿಗೆ ಉಚಿತ ತಬ್ಬಿಕೊಳ್ಳುವಿಕೆಯನ್ನು ನೀಡುವ ಮೂಲಕ ಬಿಟಿಎಸ್‌ನ 11 ನೇ ವಾರ್ಷಿಕೋತ್ಸವವನ್ನು ಆಚರಿಸಿದರು. 2013 ರಲ್ಲಿ ರಚನೆಯಾದ ಬ್ಯಾಂಡ್‌ನ ಹಿರಿಯ ಸದಸ್ಯ ಜಿನ್. ಇವರಿಗೆ ‘ಆರ್ಮಿ’ ಎಂದು ಕರೆಯುವ ಲಕ್ಷಾಂತರ ಜಾಗತಿಕ ಬೆಂಬಲಿಗರಿದ್ದಾರೆ.
ಮಿಲನ್ ಫ್ಯಾಶನ್ ವೀಕ್‌ನಲ್ಲಿ ಗುಸ್ಸಿ ಫಾಲ್-ವಿಂಟರ್ 2025/2026 ಪ್ರದರ್ಶನದಲ್ಲಿ ಜಿನ್ ಅವರ ಇತ್ತೀಚಿನ ನೋಟದಿಂದ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದ್ದಾರೆ. ಅವರ ಆರಾಧ್ಯ ಅಭಿಮಾನಿಗಳಿಂದ ‘ವರ್ಲ್ಡ್‌ವೈಡ್ ಹ್ಯಾಂಡ್ಸಮ್’ ಎಂದು ಡಬ್ ಮಾಡಲ್ಪಟ್ಟ ಜಿನ್ ಅವರ ಇತ್ತೀಚಿನ ನೋಟವು ಅವರು ಏಕೆ ಫ್ಯಾಶನ್ ಐಡಲ್ ಆಗಿದ್ದಾರೆಂದು ಮತ್ತೊಮ್ಮೆ ಸಾಬೀತುಪಡಿಸಿತು.
日本人の女がどうしたんだろうと思ったらこれ!?
日本人だからって訳ではないのか…
【現地メディア報道】BTS・JINのハグ会で50代日本人女性がキスか、韓国警察が出頭要請pic.twitter.com/mtxKL11KD9 https://t.co/9FgpAU97K5— Shin (@Shin37172430) February 27, 2025