
ಬೆಂಗಳೂರು: ಶೀಲಶಂಕಿಸಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ನಡೆಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ದಬಳ್ಳಾಪುರ ತಾಲೂಕಿನ ನೇರಳೆಘಟ್ಟದಲ್ಲಿ ನಡೆದಿದೆ.
ಪತಿ ಲಕ್ಷ್ಮಣಯ್ಯ ಬಂಧಿತ ಆರೋಪಿ. ರಾಧಮ್ಮ (45) ಪತಿಯಿಂದಲೇ ಹತ್ಯೆಯಾದ ಪತ್ನಿ. ಕುಡಿದ ನಶೆಯಲ್ಲಿ ಪತ್ನಿ ಜೊತೆ ಜಗಳವಾಡಿದ್ದ. ಗಲಾಟೆ ವೇಳೆ ಪತ್ನಿ ತಲೆಯನ್ನು ಗೋಡೆಗೆ ಗುದ್ದಿ ಕೊಲೆ ಮಡಿದ್ದಾನೆ. ಬಳಿಕ ಕುಟುಂಬಸ್ಥರ ಜೊತೆ ಸೇರಿ ಕೊಲೆ ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದಾನೆ.
ಹತ್ಯೆ ಬಳಿಕ ಪತ್ನಿ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡುತ್ತಿದ್ದ. ಈ ವೇಳೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಎಂಟ್ರಿಕೊಟ್ಟಿದ್ದು, ಆರೋಪಿ ಲಕ್ಷ್ಮಣಯ್ಯನನ್ನು ಬಂಧಿಸಿದ್ದಾರೆ.