![](https://kannadadunia.com/wp-content/uploads/2024/08/judge-.jpg)
ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಅಪರಾಧಿ ಯುವಕನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾ ಪೋಕ್ಸೋ ಎಫ್ ಟಿ ಎಸ್ ಸಿ-1 ಕೋರ್ಟ್ ದೇಶ ಹೊರಡಿಸಿದೆ.
ಪ್ರಕರಣ ನಡೆದ ಕೇವಲ ಮೂರುವರೆ ತಿಂಗಳಲ್ಲಿ ಕೋರ್ಟ್ ತೀರ್ಪು ಪ್ರಕಟಿಸಿ ಅಪರಾಧಿಗೆ ಶಿಕ್ಷೆ ವಿಧಿಸಿದೆ. ಬಿಎನ್ ಎಸ್-ಭಾರತೀಯ ನ್ಯಾಯ ಸಂಹಿತೆ ಕಾನೂನು ಜಾರಿಯಾದ ಬಳಿಕ ನೊಂದಣಿಯಾಗಿದ್ದ ಮೊದಲ ಪೋಕ್ಸೋ ಪ್ರಕರಣ ಇದಾಗಿತ್ತು.
24 ವರ್ಷದ ಯುವಕ ಮೆಕಾನಿಕ್ ಕೆಲಸ ಮಾಡುತ್ತಿದ್ದನು. ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. 2024ರಂದು ಅ.5, 10 ಹಾಗೂ 15ರಂದು ಕುಕ್ಕೇಡಿ ಬಳಿ ವಿದ್ಯಾರ್ಥಿನಿ ನಡೆದು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಆರೋಪಿ, ಬಾಲಕಿಯನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ .ಅ10ರಂದು ಬೆಳಿಗ್ಗೆ ಮತ್ತೆ ಬೈಕ್ ನಲ್ಲಿ ಬಾಲಕಿ ಹಿಂಬಾಲಿಸಿಕೊಂಡು ಬಂದು ಮತ್ತೆ ಕಿರುಕುಳ ನೀಡಿದ್ದಾನೆ. ಅ.15ರಂದು ಕೂಡ ಮತ್ತೆ ಹಿಂಬಾಲಿಸಿಕೊಂಡು ಬಂದು ನಿನ್ನ ಮೊಬೈಲ್ ನಂಬರ್ ಕೊಡು, ಸ್ಕೂಲಿಗೆ ಬಿಡುತ್ತೇನೆ ಎಂದು ಪೀಡಿಸುತ್ತಾ ಕಿರುಕುಳ ನೀಡಿದಾನೆ.
ನೊಂದ ವಿದ್ಯಾರ್ಥಿನಿ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪೊಕ್ಸೋ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಇದೀಗ ಈ ಪ್ರಕರಣ ಸಂಬಂಧ ಕೋರ್ಟ್ ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸವಿರ ರೂ.ದಂಡ ವಿಧಿಸಿದೆ. ತಪ್ಪಿದರೆ ಎರಡು ತಿಂಗಳು ಹೆಚ್ಚುವರಿ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿದೆ.