HomeKarnatakaSHOCKING : ರಾಜ್ಯದ ಈ ಜಿಲ್ಲೆಗಳಲ್ಲಿ ಹೆಚ್ಚಲಿದೆ ಬಿಸಿಲಿನ ಝಳ : ಹವಾಮಾನ ಇಲಾಖೆ...

SHOCKING : ರಾಜ್ಯದ ಈ ಜಿಲ್ಲೆಗಳಲ್ಲಿ ಹೆಚ್ಚಲಿದೆ ಬಿಸಿಲಿನ ಝಳ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಈ ವಾರ ಬಿಸಿಲಿನ ಝಳ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಸುಡು ಬಿಸಿಲು ಜನಸಾಮಾನ್ಯರನ್ನು ಕಂಗೆಡಿಸಿದೆ. 10 ಗಂಟೆಯ ಬಳಿಕ ಹೊರಗೆ ಹೋಗಲೂ ಸಹ ಹಿಂದೇಟು ಹಾಕುವಂತಾಗಿದ್ದು, ತಾಪಮಾನದಿಂದ ಜನರು ಹೈರಾಣಾಗಿದ್ದಾರೆ. ಫೆಬ್ರವರಿಯಲ್ಲೇ ಕೆಲವು ಜಿಲ್ಲೆಗಳಲ್ಲಿ 30-35 ಡಿಗ್ರೀ ಸೆ.ತಾಪಮಾನ ದಾಖಲಾಗುತ್ತಿದೆ.
ಬಾಗಲಕೋಟೆ , ಬೆಳಗಾವಿ, ಬೀದರ್. ಧಾರವಾಡ, ಗದಗ, ಹಾವೇರಿ, ರಾಯಚೂರು, ವಿಜಯಪುರ, ಹಾವೇರಿ. ಕೊಪ್ಪಳ, ಯಾದಗಿರಿಯಲ್ಲಿ ಭಾರಿ ಹವಾಮಾನ ಬದಲಾವಣೆಯಾಗಲಿದೆ.

ಹಾಗೆಯೇ ದಕ್ಷಿಣ ಕನ್ನಡ, ಉಡುಪಿ. ಬಳ್ಳಾರಿ. ಬೆಂಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು. ದಾವಣಗೆರೆ, ಹಾಸನ, ಕೊಡಗು, ಕೋಲಾರ. ಮಂಡ್ಯ. ಮೈಸೂರು, ಶಿವಮೊಗ್ಗದಲ್ಲಿ ಕೂಡ ಬಿಸಿಲಿನ ಝಳ ಹೆಚ್ಚಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular