ತೆಲಂಗಾಣ : ಶಾಲಾ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಭಯಾನಕ ವಿಡಿಯೋ ವೈರಲ್ ಆಗಿದೆ.
ಪ್ರಾಂಶುಪಾಲರು ಬೈದಿದ್ದಕ್ಕೆ ಮನನೊಂದ 10ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ರಂಗಾ ರೆಡ್ಡಿ ಜಿಲ್ಲಾ ಶಾದ್ನಗರ್ ಪ್ರೈವೇಟ್ ಶಾಲಾ ಕಟ್ಟಡದಿಂದ ಜಿಗಿದು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ನೀರಜ್ ಎಂದು ಗುರುತಿಸಲಾಗಿದೆ.
ಶಾಲೆಯ 10 ನೇ ತರಗತಿ ವಿದ್ಯಾರ್ಥಿ ನೀರಜ್ ಇನ್ನೊಬ್ಬ ವಿದ್ಯಾರ್ಥಿಯ ಜೊತೆ ಬಾಲ್ಕನಿಯಲ್ಲಿ ಮಾತನಾಡುತ್ತಿದ್ದಾಗ ಪ್ರಾಂಶುಪಾಲರು ಇಬ್ಬರನ್ನು ತಮ್ಮ ಕೋಣೆಗೆ ಕರೆದು ಬೈದಿದ್ದಾರೆ ಇದರಿಂದ ಮನನೊಂದ ನೀರಜ್ ಶೌಚಾಲಯಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿ ಕಟ್ಟಡದ ಮೇಲೆ ಹತ್ತಿ ಮೊದಲ ಮಹಡಿಯಿಂದ ಜಿಗಿದಿದ್ದಾರೆ.ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ప్రిన్సిపల్ తిట్టాడని పాఠశాల భవనం పై నుండి దూకి పదవ తరగతి విద్యార్థి ఆత్మహత్య
రంగారెడ్డి జిల్లా షాద్ నగర్ ప్రైవేట్
పాఠశాల భవనం పై నుండి దూకి పదవ తరగతి విద్యార్థి ఆత్మహత్యప్రిన్సిపల్ తిట్టాడని మనస్థాపన చెందిన విద్యార్థి నీరజ్
బీజేపీ షాద్ నగర్ పట్టణ అధ్యక్షుడు హరి భూషణ్… pic.twitter.com/uaNGgzCGmw
— Telugu Scribe (@TeluguScribe) February 5, 2025