HomeAuto‌ʼಸಂಚಾರ ನಿಯಮʼ ಉಲ್ಲಂಘನೆ: ಸ್ಕೂಟರ್ ಬೆಲೆಗಿಂತ ಹೆಚ್ಚು ದಂಡ ಕಟ್ಟಿದ ವಾಹನ ಸವಾರ‌ | Photo

‌ʼಸಂಚಾರ ನಿಯಮʼ ಉಲ್ಲಂಘನೆ: ಸ್ಕೂಟರ್ ಬೆಲೆಗಿಂತ ಹೆಚ್ಚು ದಂಡ ಕಟ್ಟಿದ ವಾಹನ ಸವಾರ‌ | Photo

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಬರೋಬ್ಬರಿ 1.61 ಲಕ್ಷ ರೂಪಾಯಿ ದಂಡ ಕಟ್ಟಿದ್ದಾರೆ. ಈ ಕುರಿತು ಬೆಂಗಳೂರು ಸಂಚಾರ ಪೊಲೀಸರು X (ಟ್ವಿಟರ್) ನಲ್ಲಿ ಮಾಹಿತಿ ನೀಡಿದ್ದಾರೆ. 2023ರ ಫೆಬ್ರುವರಿಯಿಂದ ಈವರೆಗೆ ಈ ವಾಹನದ ಮೇಲೆ 311 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

KA 05 JX 1344 ಸಂಖ್ಯೆಯ ದ್ವಿಚಕ್ರ ವಾಹನವನ್ನು ಫೆಬ್ರವರಿ 3ರಂದು ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ವಾಹನ ಸವಾರನಿಗೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಕ್ತ ಮಾಹಿತಿ ನೀಡಲಾಗಿತ್ತು.

ಪೊಲೀಸರು ಸಮನ್ಸ್ ನೀಡಿದ ನಂತರ, ದ್ವಿಚಕ್ರ ವಾಹನ ಸವಾರ 1.61 ಲಕ್ಷ ರೂಪಾಯಿ ದಂಡವನ್ನು ಪಾವತಿಸಿ ತನ್ನ ಬೈಕ್ ಅನ್ನು ಬಿಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದಂಡ ಪಾವತಿಸಿ ಬೈಕ್ ತೆಗೆದುಕೊಂಡು ಹೋಗುವ ಮಾಲೀಕರ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular