ಹಾವೇರಿ: ನಾಡಬಾಂಬ್ ಸ್ಫೋಟಗೊಂಡು ಎಮ್ಮೆಯೊಂದು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರಾಮತೀರ್ಥ ಬಳಿಯ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಎಮ್ಮೆ ಹುಲ್ಲು ಮೇಯುತ್ತಿದ್ದಾಗ ಏಕಾಏಕಿ ನಾಡಬಾಂಬ್ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಎಮ್ಮೆ ಸಾವನ್ನಪ್ಪಿದೆ. ರೈತ ಬಾಷಾ ಬೇಕಂಪುರ ಅವರಿಗೆಸೇರಿದೆ ಎಮ್ಮೆ ಇದಾಗಿದೆ. ಕಾಡಹಂದಿ ಬೇಟೆಗೆಂದು ಇಟ್ಟಿದ್ದ ನಾಡಬಾಂಬ್ ಏಕಾಏಕಿ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ.
ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.