HomeIndiaBudget Breaking: ಬಜೆಟ್ ಮಂಡನೆಗೂ ಮುನ್ನವೇ ಲೋಕಸಭೆಯಲ್ಲಿ ವಿಪಕ್ಷಗಳಿಂದ ಗಲಾಟೆ

Budget Breaking: ಬಜೆಟ್ ಮಂಡನೆಗೂ ಮುನ್ನವೇ ಲೋಕಸಭೆಯಲ್ಲಿ ವಿಪಕ್ಷಗಳಿಂದ ಗಲಾಟೆ

ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭಕ್ಕೂ ಮುನ್ನ ಲೋಕಸಭೆಯಲ್ಲಿ ವಿಪಕ್ಷಗಳು ಗದ್ದಲ-ಕೋಲಾಹಲ ನಡೆಸಿದ ಘಟನೆ ನಡೆಯಿತು.

ಬಜೆಟ್ ಮಂಡನೆಗೆ ಸ್ಪೀಕರ್ ಅನುಮತಿ ನೀಡುತ್ತಿದ್ದಂತೆಯೇ ವಿಪಕ್ಷ ಸದಸ್ಯರು ಗದ್ದಲ-ಗಲಾಟೆ ಆರಂಭಿಸಿದರು. ಬಜೆಟ್ ಮಂಡನೆಗೂ ಮುನ್ನ ಚರ್ಚೆಗೆ ಅವಕಾಶ ನೀಡುವಂತೆ ಕೇಳಿದರು. ಬಜೆಟ್ ಮಂಡನೆಗೂ ಮುನ್ನ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿ ಬಜೆಟ್ ಮಂಡನೆಗೆ ವಿತ್ತ ಸಚಿವರಿಗೆ ಸೂಚಿಸಿದರು.

ವಿಪಕ್ಷಗಳ ಗದ್ದಲ-ಕೋಲಾಹಲದ ನಡುವೆಯೇ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಆರಂಭಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular