HomeKarnatakaBIG NEWS: ಮಂಗಳೂರು-ಬೆಂಗಳೂರು ಬಸ್ ತಡೆದು ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆ

BIG NEWS: ಮಂಗಳೂರು-ಬೆಂಗಳೂರು ಬಸ್ ತಡೆದು ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆ

ಹಾಸನ: ಮಂಗಳೂರು-ಬೆಂಗಳೂರು ಖಾಸಗಿ ಬಸ್ ತಡೆದು ನಿಲ್ಲಿಸಿ, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನ್ನು ದೇವರಾಯಪಟ್ಟಣದ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದು ಬಂದ ಗ್ಯಾಂಗ್ ಬಸ್ ನ ಗಾಜುಗಳನ್ನು ಒಡೆದು ಗಲಾಟೆ ಮಾಡಿದ್ದಾರೆ.

ಓರ್ವ ವ್ಯಕ್ತಿ ಲಾಂಗ್ ಕೈಯಲ್ಲಿ ಹಿಡಿದು ಬಂದು ಬಸ್ ನ ಗಾಜುಗಳನ್ನು ಒಡೆದಿದ್ದಾನೆ. ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ದುಷ್ಕರ್ಮಿಗಳ ಅಟ್ಟಹಾಸ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular