ಅಮೆರಿಕದಲ್ಲಿ ಹೆಲಿಕಾಪ್ಟರ್ ಗೆ ಡಿಕ್ಕಿಯಾಗಿ ವಿಮಾನ ಪತನಗೊಂಡಿದ್ದು, 60 ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಯಲ್ಲಿ ಅಮೆರಿಕನ್ ಏರ್ಲೈನ್ಸ್ ಪ್ರಯಾಣಿಕರ ವಿಮಾನವು ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು ಗುರುವಾರ ಅಪಘಾತಕ್ಕೀಡಾಗಿವೆ. ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 64 ಜನರು ಇದ್ದರು ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ ಹಲವಾರು ಅಗ್ನಿಶಾಮಕ ದೋಣಿಗಳು ಘಟನಾ ಸ್ಥಳದಲ್ಲಿವೆ ಎಂದು ವಾಷಿಂಗ್ಟನ್ ಅಗ್ನಿಶಾಮಕ ಇಲಾಖೆ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕನ್ ಏರ್ಲೈನ್ಸ್ ಫ್ಲೈಟ್ 5342 ವಿಮಾನ ನಿಲ್ದಾಣದ ಬಳಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದಿದೆ. ಆದಾಗ್ಯೂ, ಈ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಇನ್ನೂ ಕಾಯಲಾಗುತ್ತಿದೆ.ರೇಗನ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ವಿಮಾನವು ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳು ತೋರಿಸಿವೆ.
⚡️CCTV footage from the Kennedy Center in Washington DC allegedly shows the moment a plane crashed into a helicopter during landing at Reagan International Airport pic.twitter.com/9sVqnfXH46
— RT (@RT_com) January 30, 2025
❗️All flights halted at Reagan International Airport after a suspected collision between a helicopter and a small plane – initial reports indicate at least three fatalities, however, this is a developing story https://t.co/6wGejkJZMB pic.twitter.com/iZn7zipsQ8
— RT (@RT_com) January 30, 2025