HomeKarnatakaBREAKING NEWS: ಸ್ನಾನಕ್ಕೆ ಹೋಗಿದ್ದ ಯುವತಿಯನ್ನು ಎಳೆದೊಯ್ದು ಅತ್ಯಾಚಾರ: ಪಕ್ಕದ ಮನೆಯಲ್ಲಿದ್ದ ಯುವಕನಿಂದಲೇ ನೀಚ ಕೃತ್ಯ

BREAKING NEWS: ಸ್ನಾನಕ್ಕೆ ಹೋಗಿದ್ದ ಯುವತಿಯನ್ನು ಎಳೆದೊಯ್ದು ಅತ್ಯಾಚಾರ: ಪಕ್ಕದ ಮನೆಯಲ್ಲಿದ್ದ ಯುವಕನಿಂದಲೇ ನೀಚ ಕೃತ್ಯ

ರಾಮನಗರ: ಕಾಮುಕನೊಬ್ಬ ಪಕ್ಕದ ಮನೆಯ ಯುವತಿಯನ್ನೇ ಎಳೆದೊಯ್ದು ಅತ್ಯಾಚಾರವೆಸಗಿರುವ ಘಟನೆ ರಾಮನಗರದ ಬಿಡದಿ ಬಡಾವಣೆಯಲ್ಲಿ ನಡೆದಿದೆ.

20 ವರ್ಷದ ಯುವತಿ ಮೇಲೆ ಅಸ್ಸಾಂ ಮೂಲದ ಮಂಜೂರ್ ಆಲಂ ಎಂಬಾತ ಈ ಕೃತ್ಯವೆಸಗಿದ್ದಾನೆ. ಯುವತಿಯ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ ಮಂಜೂರ್ ಆಲಂ, ಯಾರೂ ಇಲ್ಲದ ವೇಳೆ ಯುವತಿಯನ್ನು ಎಳೆದೊಯ್ದು ನೀಚ ಕೃತ್ಯವೆಸಗಿದ್ದಾನೆ.

ಯುವತಿ ಸ್ನಾನಕ್ಕೆಂದು ಬಾತ್ ರೂಂ ಗೆ ತೆರಳಿದ್ದಳು ಈ ವೇಳೆ ಯುವತಿಯನ್ನು ತನ್ನ ರೂಮಿಗೆ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾನೆ. ಯುವತಿಯ ಕೂಗಾಟ ಚೀರಾಟ ಕೇಳಿ ಅಕ್ಕಪಕ್ಕದವರು ಓಡಿ ಬಂದಿದ್ದಾರೆ ಅಷ್ಟರಲ್ಲಿ ಕಾಮುಕು ಕೃತ್ಯವನ್ನು ಮುಗಿಸಿಯಾಗಿತ್ತು. ರಕ್ತಸಿಕ್ತಸ್ಥಿತಿಯಲ್ಲಿಯೇ ಯುವತಿ ಹೊರಬಂದಿದ್ದು, ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀವ್ರ ರಕ್ತಸ್ರಾವದಿಂದಾಗಿ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular