HomeKarnatakaBREAKING NEWS: ಭಾರತಾಂಬೆಗೆ ಅವಮಾನ ಅಂಶಗಳಿದ್ದ ಪಠ್ಯ ತಕ್ಷಣದಿಂದಲೇ ವಾಪಸ್ ಪಡೆದ ಕರ್ನಾಟಕ ವಿವಿ

BREAKING NEWS: ಭಾರತಾಂಬೆಗೆ ಅವಮಾನ ಅಂಶಗಳಿದ್ದ ಪಠ್ಯ ತಕ್ಷಣದಿಂದಲೇ ವಾಪಸ್ ಪಡೆದ ಕರ್ನಾಟಕ ವಿವಿ

ಧಾರವಾಡ: ಭಾರತಾಂಬೆಗೆ ಅವಮಾನ ಮಾಡುವ ಅಂಶ ಒಳಗೊಂಡಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಬೆಳಗು-1ರ ಪಠ್ಯದಲ್ಲಿನ ಪಾಠವನ್ನು ಕರ್ನಾಟಕ ವಿಶ್ವವಿದ್ಯಾಲಯ ಹಿಂಪಡೆದುಕೊಂಡಿದೆ.

ಕರ್ನಾಟಕ ವಿಶ್ವವಿದ್ಯಾಲಯ 2024- 25ನೇ ಸಾಲಿನ ಕನ್ನಡ ಸ್ನಾತಕ ಪದವಿ ಬಿಎ ಪ್ರಥಮ ಸೆಮಿಸ್ಟರ್ ಪಠ್ಯಪುಸ್ತಕ ಬೆಳಗು-1ರಲ್ಲಿ ಪ್ರಕಟವಾಗಿದ್ದ ಆಕ್ಷೇಪಾರ್ಹ ಅಂಶಗಳಿಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪಠ್ಯಪುಸ್ತಕದಲ್ಲಿನ ಲೇಖನ ಹಿಂಪಡೆಯಲು ಕರ್ನಾಟಕ ವಿವಿ ತುರ್ತು ನಿರ್ಣಯ ಕೈಗೊಂಡಿದೆ.

ಬೆಳಗು-1ರ ನಾಲ್ಕನೇ ಅಧ್ಯಾಯದ ‘ರಾಷ್ಟ್ರೀಯತೆ ಆಚರಣೆಯ ಸುತ್ತ’ ಕುರಿತು ರಾಮಲಿಂಗಪ್ಪ ಟಿ. ಬೇಗೂರು ಅವರು ಬರೆದ ಲೇಖನದಲ್ಲಿ ಕೆಲವು ಆಕ್ಷೇಪಾರ್ಹ ಅಂಶ ಒಳಗೊಂಡಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕರ್ನಾಟಕ ವಿವಿ ಆಡಳಿತ ವಿಭಾಗದಿಂದ ಸಭೆ ನಡೆಸಿ ತಕ್ಷಣದಿಂದ ಜಾರಿಗೆ ಬರುವಂತೆ ಪಠ್ಯ ಲೇಖನವನ್ನು ಹಿಂಪಡೆಯಲಾಗಿದೆ. ಅದನ್ನು ಹೊರತುಪಡಿಸಿ ಬೆಳಗು -1 ಪಠ್ಯಪುಸ್ತಕ ಮುಂದುವರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿವಾದಿತ ಪಠ್ಯ ವಾಪಸ್ ಬಗ್ಗೆ ಕರ್ನಾಟಕ ವಿವಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ. ಮೌಲ್ಯಮಾಪನ ಕುಲಸಚಿವರು ಆದೇಶ ಹೊರಡಿಸಿದ್ದು, ಬೆಳಗು-1ರ ಪಠ್ಯದಲ್ಲಿನ ವಿವಾದಿತ ಅಧ್ಯಾಯವನ್ನು ವಾಪಸ್ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular