ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಂಧ್ರಪ್ರದೇಶದ ಅನಂತಪುರದ ನಾರಾಯಣ ಕಾಲೇಜಿನ ಮೊದಲ ವರ್ಷದ ಅಂತರ ಕಾಲೇಜು ವಿದ್ಯಾರ್ಥಿ ಚರಣ್ ಗುರುವಾರ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯ ಭಯಾನಕ ವೀಡಿಯೊ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿದೆ.
ತರಗತಿಯ ಸಮಯದಲ್ಲಿ ವಿದ್ಯಾರ್ಥಿ ಕೋಣೆಯಿಂದ ಹೊರಹೋಗುವುದನ್ನು ವೀಡಿಯೊ ತೋರಿಸುತ್ತದೆ. ಹೊರಗಡೆ ಹೋದವನೇ ಏಕಾಏಕಿ ಕಟ್ಟಡದಿಂದ ಜಿಗಿದಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.ವಿದ್ಯಾರ್ಥಿ ಜಿಗಿಯುವುದನ್ನು ನೋಡಿದ ಶಿಕ್ಷಕರು ಮತ್ತು ಸಹಪಾಠಿಗಳು ಶಾಕ್ ಆದರು. ತಕ್ಷಣ ಎಲ್ಲರೂ ಹೊರಗಡೆ ಓಡಿ ಹೋದರು. ವಿದ್ಯಾರ್ಥಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
సీసీ ఫుటేజ్
అనంతపురం సమీపంలోని నారాయణ కాలేజీలో బిల్డింగ్ పై నుండి దూకి ఇంటర్ విద్యార్థి చరణ్ ఆత్మహత్య
ఫస్ట్ ఇయర్ చదువుతున్న చరణ్ క్లాస్ జరుగుతుండగానే బయటికి వచ్చి మూడో అంతస్తు నుంచి దూకి ఆత్మహత్య
సూసైడ్ చేసుకోవడంతో బోరున విలపిస్తున్న కుటుంబ సభ్యులు pic.twitter.com/kCDeMmMIfn
— Telugu Scribe (@TeluguScribe) January 23, 2025