ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿ ವೇಳೆ ಸಿಆರ್ ಪಿಎಫ್ ಶ್ವಾನ ತನ್ನ ಪ್ರಾಣ ಪಣಕ್ಕಿಟ್ಟು ಯೋಧರನ್ನು ರಕ್ಷಿಸಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದ್ದು, ಇದೀಗ ಈ ಶ್ವಾನ ಭಾರಿ ಸುದ್ದಿಯಾಗುತ್ತಿದೆ.
ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಚಿಣಗೇಲೂರು ಬಳಿ ನಕ್ಸಲರ ವಿರುದ್ಧದ ಕಾರ್ಯಾಚಾರಣೆ ವೇಳೆ ಭದ್ರತಾ ಪಡೆಗಳು ಗಸ್ತು ತಿರುಗುತ್ತಿದ್ದ ವೇಳೆ ಐಇಡಿ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ ಸೈನಿಕರ ಜೊತೆಗಿದ್ದ ಸಿಆರ್ ಪಿಎಫ್ ಶ್ವಾನ ಗಂಭೀರವಾಗಿ ಗಾಯಗೊಂಡಿದೆ. ಸ್ಫೋಟದಲ್ಲಿ ಮೂರು ವರ್ಷದ ಬೆಲ್ಜಿಯನ್ ಶೆಫರ್ಡ್ ರ್ಯಾಕರ್ ‘ಆಂಡ್ರೋ’ ಬಲಗಾಲಿನ ಮೂಳೆ ಮುರಿದಿದೆ.
ನಕ್ಸಲರ ವಿರುದ್ಧದ ಕಾರ್ಯಾಚಾರಣೆ ವೇಳೆ ಈ ಶ್ವಾನ 229ನೇ ಬೆಆಲಿಯನ್ ಆಲ್ಫಾ ಕಂಪನಿಯ ಸೈನಿಕರ ಜೀವವನ್ನು ರಕ್ಷಿಸಿದೆ. ಶ್ವಾನಕ್ಕೆ ಬಿಜಾಪುರ ಜಿಲ್ಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು 2023ರಲ್ಲಿರಲ್ಲಿಯೂ ಇಂತದ್ದೇ ಘಟನೆ ನಡೆದಿತ್ತು. ಛತ್ತೀಸ್ ಗಢದ ನಾರಾಯಣಪುರದಲ್ಲಿ ನಾನಿಯೊಂದು ತನ್ನ ಪ್ರಾಣ ತ್ಯಾಗ ಮಾಡಿ ಹಲವು ಸೈನಿಕರ ಜೀವ ಉಳಿಸಿತ್ತು. ಘಟನೆಯಲ್ಲಿ ಐಟಿಬಿಪಿಯ ಯೋಧ ಸಣ್ಣಪುಟ್ಟ ಗಯಾಗಳಿಂದ ಪಾರಾಗಿದ್ದರು.