ವಿಶ್ವದಲ್ಲೇ, ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಅತಿದೊಡ್ಡ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಹೊಸ ಡೆಸ್ಟಿನಿ 125 ನ್ನು ಬಿಡುಗಡೆ ಮಾಡುವ ಮೂಲಕ 125 ಸಿಸಿ ಸ್ಕೂಟರ್ ವಿಭಾಗಕ್ಕೆ ಹೊಸ ಹುರುಪನ್ನು ನೀಡುತ್ತಿದೆ.
ನಗರ ಸಂಚಾರಕ್ಕೆ ಇನ್ನಷ್ಟು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾದ ನ್ಯೂ ಡೆಸ್ಟಿನಿ 125, ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಮೈಲೇಜ್ ಮತ್ತು ಅಚಲ ವಿಶ್ವಾಸಾರ್ಹತೆಗಳನ್ನು ಹೊಂದಿದೆ. ಕಾರ್ಯಕ್ಷಮತೆ ಮತ್ತು ಪ್ರಾಯೋಗಿಕತೆ ಎರಡೂ ಇದರಲ್ಲಿ ಅತ್ಯುತ್ತಮವಾಗಿ ಮೇಳೈಸಿವೆ. ದೈನಂದಿನ ನಗರ ಸಂಚಾರಗಳಿಗೆ ಇದು ಹೊಸ ಮಾನದಂಡವನ್ನು ರೂಪಿಸುತ್ತದೆ ಮತ್ತು ಸವಾರರ ನಿರೀಕ್ಷೆಗಳನ್ನು ಮೀರಿಸುವಂತಿದೆ.
ಹೊಸ ಹೀರೋ ಡೆಸ್ಟಿನಿ 125 ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ:
* ಡೆಸ್ಟಿನಿ 125 VX – ರೂ.80,450
* ಡೆಸ್ಟಿನಿ 125 ZX – ರೂ. 89,300
* ಡೆಸ್ಟಿನಿ 125 ZX+ – ರೂ. 90,300
(ದೆಹಲಿಯಲ್ಲಿ ಪರಿಚಯಾತ್ಮಕ ಎಕ್ಸ್-ಶೋರೂಮ್ ಬೆಲೆ)
30 ಪೇಟೆಂಟ್ ಅರ್ಜಿಗಳು ಮತ್ತು ಸುಧಾರಿತ ರೈಡರ್ ಅನುಕೂಲತೆ ಮತ್ತು ಸುರಕ್ಷತೆಗಾಗಿ ಪ್ರಕಾಶಿತ ಸ್ಟಾರ್ಟ್ ಸ್ವಿಚ್ ಮತ್ತು ಆಟೋ-ಕ್ಯಾನ್ಸಲ್ ವಿಂಕರ್‌ಗಳಂತಹ ಉದ್ಯಮದಲ್ಲೇ ಮೊದಲ ವೈಶಿಷ್ಟ್ಯಗಳಿರುವ ಹೊಸ ಡೆಸ್ಟಿನಿ 125, ಹೀರೋ ಮೋಟೋಕಾರ್ಪ್‌ಗೆ ನಾವೀನ್ಯತೆಯ ಕುರಿತಂತೆ ಇರುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಹೊಸ ಡೆಸ್ಟಿನಿ 125, ಕುಟುಂಬಗಳಿಗೆ ಸೂಕ್ತ ಆಯ್ಕೆಯಾಗಿದ್ದು, 59 ಕಿಮೀ/ಲೀಟರ್‌ನ ವಿಭಾಗದಲ್ಲಿ ಅತೀ ಹೆಚ್ಚಿನ ಮೈಲೇಜ್, ಆರಾಮವಾಗಿ ಕಾಲಿಡಲು ಸ್ಥಳ ಮತ್ತು ವಿಶಾಲವಾದ ಫ್ಲೋರ್‌ಬೋರ್ಡ್ ಗಳನ್ನು ಹೊಂದಿದೆ. ಡೆಸ್ಟಿನಿ 125 ಉದ್ದವಾದ ಸೀಟನ್ನು ಹೊಂದಿದ್ದು ಸವಾರರಿಗೆ ಆರಾಮದಾಯಕ ಮತ್ತು ದಕ್ಷತಾಶಾಸ್ತ್ರದ ಅತ್ಯುತ್ತಮ ಅನುಭವವನ್ನು ನೀಡುತ್ತದೆ.
ಸ್ಮಾರ್ಟ್, ಸುಗಮ ಮತ್ತು ಮಿತ ವ್ಯಯದಲ್ಲಿ ಓಡಾಡಲು ವಿನ್ಯಾಸಗೊಳಿಸಲಾದ ಈ ಸ್ಕೂಟರ್, ಹೊಸ ಡಿಜಿಟಲ್ ಸ್ಪೀಡೋಮೀಟರ್, 190ಮಿಮೀ ಫ್ರಂಟ್ ಡಿಸ್ಕ್ ಬ್ರೇಕ್, ನವೀಕರಿಸಿದ 12/12 ಪ್ಲಾಟ್‌ಫಾರ್ಮ್ ಮತ್ತು ಅಗಲವಾದ ಹಿಂಬದಿ ಚಕ್ರವನ್ನು ಹೊಂದಿದೆ. ದಕ್ಷತೆ ಹೆಚ್ಚಿಸಲು ಹೀರೋನ ನವೀನ i3S (ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್) ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಬಹಳ ಆಲೋಚಿಸಿ ವಿನ್ಯಾಸಗೊಳಿಸಲಾದ ಸೀಟ್ ಬ್ಯಾಕ್‌ರೆಸ್ಟ್, ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅತ್ಯುತ್ತಮ ಸವಾರಿ ಅನುಭವವನ್ನು ನೀಡುತ್ತದೆ.