ಬಳ್ಳಾರಿ : ರಾಜ್ಯದ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಜನವರಿ 17 ರಂದು ಬಳ್ಳಾರಿ ಜಿಲ್ಲೆಯಲ್ಲಿ ಒಂದು ದಿನದ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಜ.17 ರಂದು ಮಧ್ಯಾಹ್ನ ಬೆಂಗಳೂರಿನ ಹೆಚ್ಎಎಲ್ನ ಏರ್ಪೋರ್ಟ್ ನಿಂದ ವಿಶೇಷ ವಿಮಾನ ಮೂಲಕ ಹೊರಟು, ಮಧ್ಯಾಹ್ನ 03.10 ಗಂಟೆಗೆ ಬಳ್ಳಾರಿಯ ಜಿಂದಾಲ್ ಏರ್ಪೋಟ್ಗೆ ಆಗಮಿಸುವರು. ಅಲ್ಲಿಂದ 03.15 ಕ್ಕೆ ಹೊರಟು ಸಂಜೆ 04 ಗಂಟೆಗೆ ಕುರುಗೋಡು ತಾಲ್ಲೂಕಿನ ದಮ್ಮೂರು ಗ್ರಾಮದ ಬಳಿಯ ಎಸ್ಬಿ ಸಂಸ್ಥೆಯ ಬೃಂದಾ ನ್ಯಾಷನಲ್ ಪಬ್ಲಿಕ್ ಶಾಲೆ, ಬೃಂದಾ ಪಿಯು ಕಾಲೇಜ್, ಬೃಂದಾ ಡಿಗ್ರಿ ಕಾಲೇಜ್ ಮತ್ತು ಸ್ಕಂದ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜ್ಗಳ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಬಳಿಕ ಸಂಜೆ 05 ಗಂಟೆಗೆ ಹೊರಟು, ಜಿಂದಾಲ್ ಏರ್ಪೋರ್ಟ್ ನಿಂದ ವಿಶೇಷ ವಿಮಾನದ ಮೂಲಕ ಇಂದೋರ್ಗೆ ಪ್ರಯಾಣಿಸುವರು ಎಂದು ಪ್ರಕಟಣೆ ತಿಳಿಸಿದೆ.