HomeKarnataka6 ನಕ್ಸಲರ ಶರಣಾಗತಿ ಬೆನ್ನಲ್ಲೇ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿರುವ ಏಕೈಕ ನಕ್ಸಲ್

6 ನಕ್ಸಲರ ಶರಣಾಗತಿ ಬೆನ್ನಲ್ಲೇ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿರುವ ಏಕೈಕ ನಕ್ಸಲ್

ಬೆಂಗಳೂರು: ನಾಲ್ಕು ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ 6 ನಕ್ಸಲರು ಗೃಹಕಚೇರಿ ಕೃಷ್ಣಾದಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ್ ಮುಂದೆ ಶರಣಾಗತರಾಗಿದ್ದಾರೆ. ಆದರೆ ನಕ್ಸಲ್ ಪಟ್ಟಿಯಲ್ಲಿದ್ದ ಓರ್ವ ನಕ್ಸಲ್ ಮಾತ್ರ ಶರಣಾಗದೇ ಉಳಿದುಕೊಂಡಿದ್ದಾನೆ.

ಕರ್ನಟಕದ ನಾಲ್ವರು, ಹೊರ ರಾಜ್ಯದ ಇಬ್ಬರು ನಕ್ಸಲರು ಸೇರಿ 6 ನಕ್ಸಲರು ಶರಣಾಗಿದ್ದು, ನಕ್ಸಲ್ ಪಟ್ತಿಯಲ್ಲಿದ್ದ ಮತ್ತೋರ್ವ ನಕ್ಸಲ್ ರವೀಂದ್ರ ಯಾರ ಸಂಪರ್ಕಕ್ಕೂ ಸಿಗದೇ ತಲೆಮರೆಸಿಕೊಂಡಿದ್ದಾನೆ.

ನಕ್ಸಲ್ ಪಟ್ಟಿಯಲ್ಲಿದ್ದ 8 ನಕ್ಸಲರ ಪೈಕಿ ಇತ್ತೀಚೆಗೆ ವಿಕ್ರಂಗೌಡ ಎನ್ ಕೌಂಟರ್ ಆಗಿತ್ತು. ಉಳಿದ 7 ನಕ್ಸಲರಲ್ಲಿ 6 ನಕ್ಸಲರು ಸರ್ಕಾರಕ್ಕೆ ಶರಣಾಗಿದ್ದಾರೆ. ಆದರೆ ಏಕೈಕ ನಕ್ಸಲ್ ರವೀಂದ್ರ ಮಾತ್ರ ಇನ್ನೂ ಶರಣಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಕೇಸ್ ಗಳು ದಾಖಲಾಗಿವೆ. ನಕ್ಸಲ್ ಶರಣಾಗತಿ ಸಮಿತಿ ಸಂಪರ್ಕಕ್ಕೂ ಸಿಗದೇ ವರ್ಷಗಳಿಂದ ಭೂಗತನಾಗಿದ್ದಾನೆ ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular