ನವದೆಹಲಿ: ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಿದೆ. ಶುದ್ಧ ಚಿನ್ನದ ದರ 10 ಗ್ರಾಂಗೆ 700 ರೂ. ಏರಿಕೆಯಾಗಿದ್ದು, 79 700 ರೂ.ಗೆ ಮಾರಾಟವಾಗಿದೆ.
ಆಭರಣ ಚಿನ್ನದ ದರ 10 ಗ್ರಾಂ ಗೆ 700 ರೂ. ಏರಿಕೆಯಾಗಿದ್ದು, 79,300 ರೂ.ಗೆ ಮಾರಾಟವಾಗಿದೆ. ಬೆಳ್ಳಿ ದರ ಕೆಜಿಗೆ 1300 ರೂ. ಏರಿಕೆಯಾಗಿ 92,000 ರೂ.ತಲುಪಿದೆ.
ದೇಶಿಯ ಆಭರಣ ತಯಾರಿಕರು ಮತ್ತು ವರ್ತಕರಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಗೆ ಬೇಡಿಕೆ ಇರುವ ಕಾರಣ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿರುವುದರಿಂದ ಚಿನ್ನದ ದರ ಏರುಗತಿಯಲ್ಲಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 7215 ರೂ. ಇದ್ದು 10 ಗ್ರಾಂ ಗೆ 72,150 ರೂ. ಆಗಿದೆ. 24 ಕ್ಯಾರೆಟ್ ನ ಚಿನ್ನದ ದರ 10 ಗ್ರಾಂ ಗೆ 78210 ರೂ. ಇದೆ.