ಬಿಹಾರದ ಜಮುಖರಿಯಾ ಗ್ರಾಮದ ಕಂಪ್ಯೂಟರ್ ಎಂಜಿನಿಯರ್ ಅಭಿಷೇಕ್ ಕುಮಾರ್ ಗೂಗಲ್‌ನ ಲಂಡನ್ ಕಚೇರಿಯಲ್ಲಿ ವಾರ್ಷಿಕ 2 ಕೋಟಿ ರೂಪಾಯಿ ಸಂಬಳದ ಉದ್ಯೋಗ ಪಡೆದು ಭಾರತದ ಚಿಕ್ಕ ಪಟ್ಟಣಗಳಿಂದ ಬಂದಿರುವ ಮಹತ್ವಾಕಾಂಕ್ಷಿ ಎಂಜಿನಿಯರ್‌ಗಳಿಗೆ ಪ್ರೇರಣೆಯಾಗಿದ್ದಾರೆ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಭಿಷೇಕ್ ಅವರ ತಂದೆ ಇಂದ್ರದೇವ್ ಯಾದವ್ ಜಮುಖರಿಯಾ ಸಿವಿಲ್ ನ್ಯಾಯಾಲಯದ ವಕೀಲರಾಗಿದ್ದಾರೆ ಮತ್ತು ತಾಯಿ ಮಂಜು ದೇವಿ ಗೃಹಿಣಿಯಾಗಿದ್ದಾರೆ. ಅವರು ಝಾಜ್ಹಾದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ), ಪಾಟ್ನಾದಿಂದ ಸಾಫ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
ಗೂಗಲ್‌ಗೆ ಸೇರುವ ಮೊದಲು, ಅಭಿಷೇಕ್ ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದರು, ಅಲ್ಲಿ ಅವರು ವಾರ್ಷಿಕ 1.08 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದರು. ಮಾರ್ಚ್ 2023 ರಲ್ಲಿ, ಅವರು ಯಶಸ್ವಿಯಾಗಿ ಗೂಗಲ್‌ನ ಸಂದರ್ಶನ ಎದುರಿಸಿ ಈ ಪ್ರತಿಷ್ಠಿತ ಅವಕಾಶವನ್ನು ಗಳಿಸಿದರು.
“ಇದು ನನ್ನ ಅತ್ಯಂತ ದೊಡ್ಡ ಸಾಧನೆ ಮತ್ತು ನಾನು ಅತ್ಯಂತ ಉತ್ಸುಕನಾಗಿದ್ದೇನೆ” ಎಂದು ಅಭಿಷೇಕ್ ಎನ್‌ಡಿಟಿವಿಯೊಂದಿಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. “ಗೂಗಲ್‌ನಲ್ಲಿ ಕೆಲಸ ಮಾಡುವುದು ಅನೇಕ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಕನಸಾಗಿದೆ ಮತ್ತು ಪ್ರಭಾವಶಾಲಿ ಯೋಜನೆಗಳಲ್ಲಿ ಕೆಲಸ ಮಾಡಲು ನಾನು ಥ್ರಿಲ್ ಆಗಿದ್ದೇನೆ.” ಎಂದಿದ್ದಾರೆ.