HomeIndiaBIG BREAKING: ಬೋರ್ವೆಲ್ ಗೆ ಬಿದ್ದ 9 ದಿನಗಳ ನಂತರ ಸಾವನ್ನೇ ಗೆದ್ದು ಬಂದ ಬಾಲೆ

BIG BREAKING: ಬೋರ್ವೆಲ್ ಗೆ ಬಿದ್ದ 9 ದಿನಗಳ ನಂತರ ಸಾವನ್ನೇ ಗೆದ್ದು ಬಂದ ಬಾಲೆ

ರಾಜಸ್ತಾನದ ಕೊಟ್‌ಪುಟ್ಲಿಯಲ್ಲಿ ಬೋರ್‌ವೆಲ್‌ ನಲ್ಲಿ ಸಿಲುಕಿದ್ದ 3 ವರ್ಷದ ಚೇತನಾಳನ್ನು ಒಂಬತ್ತು ದಿನಗಳ ನಂತರ ಬುಧವಾರ ರಕ್ಷಿಸಲಾಗಿದೆ.

ಡಿಸೆಂಬರ್ 23 ರಂದು ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಯು ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಚೇತನಾ ಡಿಸೆಂಬರ್ 23 ರಿಂದ 150 ಅಡಿ ಆಳದ ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಿದ್ದಳು. NDRF ಮತ್ತು SDRF ರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಸಮಾನಾಂತರ ಸುರಂಗ ಕೊರೆಯಲು ತಂಡಗಳು ಹಗಲಿರುಳು ಶ್ರಮಿಸುತ್ತಿದ್ದವು.

ಬಹುಶಃ ರಾಜ್ಯದಲ್ಲಿಯೇ ಸುದೀರ್ಘವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದ್ದು, ಇದು 160 ಗಂಟೆಗಳ ಕಾಲ ನಡೆಯಿತು, ಇದಕ್ಕಾಗಿ ಕುಟುಂಬ ಸದಸ್ಯರು ಆಡಳಿತವನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ ಆಡಳಿತವು ಇದು ಕಠಿಣ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿತ್ತು. ಕೊನೆಗೂ ಎಲ್ಲರ ಪ್ರಯತ್ನ, ಪ್ರಾರ್ಥನೆ ಫಲಿಸಿದ್ದು, ಬಾಲಕಿಯನ್ನು ಬೋರ್ ವೆಲ್ ನಿಂದ ರಕ್ಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular