HomeKarnatakaBIG NEWS: ಮದ್ಯ ಮಾರಾಟಕ್ಕೆ 1 ದಿನದ ಲೈಸೆನ್ಸ್ ಪಡೆಯುವವರಿಗೆ ಶಾಕ್ ಕೊಟ್ಟ ಸರ್ಕಾರ

BIG NEWS: ಮದ್ಯ ಮಾರಾಟಕ್ಕೆ 1 ದಿನದ ಲೈಸೆನ್ಸ್ ಪಡೆಯುವವರಿಗೆ ಶಾಕ್ ಕೊಟ್ಟ ಸರ್ಕಾರ

ಬೆಂಗಳೂರು: ಈ ಬಾರಿ ಹೊಸ ವರ್ಷಾಚರಣೆ ವೇಳೆ ಒಂದು ದಿನದ ಮಧ್ಯ ಮಾರಾಟಕ್ಕೆ ಲೈಸೆನ್ಸ್ ನೀಡುವ ಪದ್ಧತಿಗೆ ಸರ್ಕಾರ ಬ್ರೇಕ್ ಹಾಕಿದೆ.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಹಿನ್ನೆಲೆಯಲ್ಲಿ ದೇಶಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಒಂದು ದಿನದ ಮದ್ಯ ಪರವಾನಿಗೆ ನೀಡಲು ಸರ್ಕಾರ ನಿರಾಕರಿಸಿದೆ.

ಇದರಿಂದಾಗಿ ನೂರಾರು ವ್ಯಾಪಾರಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಎಷ್ಟೋ ವ್ಯಾಪಾರಿಗಳು ಹೊಸ ವರ್ಷದ ವೇಳೆ ಒಂದು ದಿನದ ಮದ್ಯ ಮಾರಾಟಕ್ಕೆ ಲೈಸೆನ್ಸ್ ಪಡೆದು ಮದ್ಯ ಮಾರಾಟ ಮಾಡುತ್ತಿದ್ದರು. ಆದರೆ ಈಗ ಈ ಲೈಸನ್ಸ್ ಕೊಡಲು ಸರ್ಕಾರ ನಿರಾಕರಿಸಿದ್ದು, ವ್ಯಾಪಾರಿಗಳಿಗೆ ನಿರಾಸೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೊಸ ವರ್ಷಾಚರಣೆಗಾಗಿ ಬೆಂಗಳೂರು ನಗರ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂಎ ಹೋಟೆಲ್, ರೆಸ್ಟೋರೆಂಟ್, ಪಬ್ ಗಳು ಸಜ್ಜಾಗಿವೆ. ಇವುಗಳ ಜೊತೆಗೆ ಒಂದು ದಿನದ ಮದ್ಯ ಮಾರಾಟಕ್ಕೆ ಲೈಸೆನ್ಸ್ ಪಡೆಯುವವರು ಸಿದ್ಧತೆ ಅಡಿಕೊಂಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಲೈಸೆನ್ಸ್ ಸಿಗದೇ ಪರದಾಟ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular