ಬೆಂಗಳೂರು : 2024-25ನೇ ಸಾಲಿಗಾಗಿ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2024-25 ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ಸ್ನಾತಕೋತ್ತರದವರೆಗೆ ಅತಿ ಹೆಚ್ಚು ನಿಧಿಯ ವತಿಯಿಂದ ಪಡೆದ ಶಿಕ್ಷಕರುಗಳ/ ಉಪನ್ಯಾಸಕರು/ಪ್ರಾಂಶುಪಾಲರು/ ನಿವೃತ್ತ ಶಿಕ್ಷಕರು/ ನಿವೃತ್ತ ಉಪನ್ಯಾಸಕರು/ಪ್ರಾಂಶುಪಾಲರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡುವ ಸಲುವಾಗಿ ONLINE ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕಾಗಿ ಬರುವ ಭೌತಿಕ ಅರ್ಜಿಗಳನ್ನು ಈ ಕಛೇರಿಯಲ್ಲಿ ಪರಿಗಣಿಸಲಾಗುವುದಿಲ್ಲ. ನಿಧಿಗಳ ಕಛೇರಿಯಿಂದ ಈಗಾಗಲೆ ಆನ್ಲೈನ್ನಲ್ಲಿ ಆಜೀವ ಸದಸ್ಯತ್ವದ ಹೊಸ ನೋಂದಣಿ ಸಂಖ್ಯೆ ಪಡೆದ ಶಿಕ್ಷಕರು/ ಉಪನ್ಯಾಸಕರು/ಪ್ರಾಂಶುಪಾಲರು/ ನಿವೃತ್ತಿ ಹೊಂದಿರುವ ಶಿಕ್ಷಕರು/ಉಪನ್ಯಾಸಕರು/ಪ್ರಾಂಶುಪಾಲರು ಮಾತ್ರ ತಮ್ಮ ಮಗುವಿನ ವಿವರಗಳನ್ನು ಸಂಬಂಧಿಸಿದ ONLINE PORTAL ನಲ್ಲಿ ಗಣಕೀಕರಿಸುವಂತೆ ಈ ಮೂಲಕ ಸೂಚಿಸಿದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. (CBSE / ICSE ವಿದ್ಯಾರ್ಥಿಗಳಿಗೆ ಅವಕಾಶವಿರುವುದಿಲ್ಲ)
2023-24ನೇ ಶೈಕ್ಷಣಿಕ ಸಾಲಿನ ಪದವಿ ಅಂತಿಮ ವರ್ಷದ ಬಿ.ಎ/ ಬಿ.ಎಸ್ಸಿ/ ಬಿ.ಕಾಂ/ಬಿ.ಇಡಿ/ ಬಿ.ಸಿ.ಎ/ ৩.৩.১০/۵…./../..) (BA/BSC/ B.COM/ B.ED/BCA/ BBM/ BSC.Ag/ BHM/ LLB) ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಅಂದರೆ 2ನೇ ಸೆಮಿಸ್ಟರ್ ಉತ್ತೀರ್ಣರಾಗಿ 3ನೇ ಸೆಮಿಸ್ಟನರ್ಲ್ಲಿ ក ដ ឯក (MA, Msc, M.com, Med, MSCAg, MLIB) 2 ONLINE ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
2023-24ನೇ ಶೈಕ್ಷಣಿಕ ಸಾಲಿನಲ್ಲಿ BE 6ನೇ ಸೆಮಿಸ್ಟರ್ ಉತ್ತೀರ್ಣರಾದವರು ಹಾಗೂ ಪ್ರಸ್ತುತ BE 7ನೇ ಸೆಮಿಸ್ಟರ್ ಓದುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ. 2023-24ನೇ ಶೈಕ್ಷಣಿಕ ಸಾಲಿನಲ್ಲಿ MBBS 2ನೇ ಫೇಸ್ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಹಾಗೂ 3ನೇ ಫೇಸ್ನಲ್ಲಿ (MBBS BDS/ BHMS/ BAMS/ BUMS) ಓದುತ್ತಿರುವವರು ONLINE ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.