alex Certify ಮಧ್ಯಮ ವರ್ಗಕ್ಕೆ ಬಂಪರ್ ಕೊಡುಗೆ: 15 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲು ಚಿಂತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಧ್ಯಮ ವರ್ಗಕ್ಕೆ ಬಂಪರ್ ಕೊಡುಗೆ: 15 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲು ಚಿಂತನೆ

ನವದೆಹಲಿ: ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡುವ ಸಾಧ್ಯತೆ ಇದೆ. 15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲು ಚಿಂತನೆ ನಡೆದಿದ್ದು, ಫೆಬ್ರವರಿ 1ರ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡುವ ಸಂಭವ ಇದೆ ಎಂದು ಹೇಳಲಾಗಿದೆ.

ಮಧ್ಯಮ ವರ್ಗದವರ ಮೇಲಿನ ಹೊರೆ ತಗ್ಗಿಸಿ ಅವರ ಕೊಳ್ಳುವಿಕೆ ಸಾಮರ್ಥ್ಯ ಹೆಚ್ಚಿಸಲು 15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2020ರಲ್ಲಿ ಹೊಸ ತೆರಿಗೆ ಪದ್ಧತಿ ಜಾರಿಗೂ ಮೊದಲು ಇದ್ದ ಆದಾಯ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ತೆರಿಗೆ ಪಾವತಿದಾರರಿಗೆ ಮನೆ ಬಾಡಿಗೆ, ವಿಮೆ ಪ್ರೀಮಿಯಂ ಮೊದಲಾದ ವೆಚ್ಚಗಳಲ್ಲಿ ವಿನಾಯಿತಿ ಇರುತ್ತಿತ್ತು. ಆದರೆ, ತೆರಿಗೆ ದರ ಹೆಚ್ಚಾಗಿ ಇರುತ್ತಿತ್ತು. 2020ರಲ್ಲಿ ಜಾರಿಗೊಳಿಸಿದ ಪದ್ಧತಿಯಲ್ಲಿ ತೆರಿಗೆ ದರ ಕಡಿಮೆ ಮಾಡಲಾಗಿತ್ತು. ಆದರೆ, ಮನೆ ಬಾಡಿಗೆ, ವಿಮೆ ಪ್ರೀಮಿಯಂ ಮೇಲಿನ ವಿನಾಯಿತಿ ರದ್ದು ಮಾಡಲಾಗಿತ್ತು.

ಪ್ರಸ್ತುತ 3ರಿಂದ 15 ಲಕ್ಷ ರೂಪಾಯಿಯವರೆಗಿನ ಆದಾಯಕ್ಕೆ ಶೇಕಡ 5ರಿಂದ ಶೇಕಡ 20ರಷ್ಟು ತೆರಿಗೆ ಇದೆ. ಅದಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ ಇದ್ದು, ತೆರಿಗೆ ಪಾವತಿ ಮಿತಿ ಹೆಚ್ಚಳ ಮಾಡಿದಲ್ಲಿ ಮಧ್ಯಮ ವರ್ಗದ ಜನತೆಗೆ ಭಾರಿ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ 15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲು ಚಿಂತನೆ ನಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...