ಮುಂಬೈ: ತನ್ನ ಬಾಸ್ ಜತೆಗೆ ಹಾಸಿಗೆ ಹಂಚಿಕೊಳ್ಳಲು ನಿರಾಕರಿಸಿದ ಪತ್ನಿ ಟೆಕ್ಕಿಯೊಬ್ಬ ತ್ರಿವಳಿ ತಲಾಖ್ ನೀಡಿದ ಘಟನೆ ಮಹಾರಾಷ್ಟ್ರದ ಕಲ್ಯಾಣ್ ಪ್ರದೇಶದಲ್ಲಿ ನಡೆದಿದೆ. ಡಿಸೆಂಬರ್ 19 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಸೊಹೇಲ್ ಶೇಖ್ ನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಬಾಸ್ ಜೊತೆ ಮಲಗಲು ನಿರಾಕರಿಸಿದ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಆರೋಪದ ಮೇಲೆ ಸಾಫ್ಟ್ ವೇರ್ ಇಂಜಿನಿಯರ್ ಸಹೇಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 19 ರಂದು 45 ವರ್ಷದ ಸೊಹೇಲ್ ತನ್ನ 28 ವರ್ಷದ ಪತ್ನಿಗೆ ಪಾರ್ಟಿಯಲ್ಲಿ ತನ್ನ ಬಾಸ್ ಜೊತೆ ಅನ್ಯೋನ್ಯವಾಗಿರುವಂತೆ ಒತ್ತಾಯಿಸಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದು, ಆರಂಭದಲ್ಲಿ ಅನ್ಯೋನ್ಯವಾಗಿದ್ದ ಸೊಹೇಲ್ ನಂತರ ಹಣಕ್ಕಾಗಿ ಪೀಡಿಸಿದ್ದ. ಮೊದಲ ಪತ್ನಿಗೆ ವಿಚ್ಛೇದನ ನೀಡಲು 15 ಲಕ್ಷ ರೂಪಾಯಿ ಬೇಕು ಎಂದು ಕೇಳಿದ್ದ. ಹಣಕ್ಕಾಗಿ ಪೀಡಿಸಿದ್ದ ಎನ್ನಲಾಗಿದೆ.
ತನ್ನ ಬಾಸ್ ಜೊತೆ ಮಲಗಲು ನಿರಾಕರಿಸಿದ ನಂತರ ಪತಿ ತನ್ನ ಎರಡನೇ ಹೆಂಡತಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ತಕ್ಷಣ ತಲಾಖ್ ನೀಡಿದ ಬಳಿಕ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಪತ್ನಿ ಸಂಭಾಜಿ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಮರುದಿನ ಪ್ರಕರಣವನ್ನು ಕಲ್ಯಾಣ್‌ನ ಬಜಾರ್‌ಪೇತ್ ಠಾಣೆಗೆ ವರ್ಗಾಯಿಸಲಾಗಿದೆ.