alex Certify SHOCKING : ಗಾಳಿ ತುಂಬುವಾಗ ಟೈರ್ ಸ್ಪೋಟಗೊಂಡು ಮೇಲಕ್ಕೆ ಹಾರಿ ಬಿದ್ದ ವ್ಯಕ್ತಿ : ಭಯಾನಕ ವಿಡಿಯೋ ವೈರಲ್| Watch Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಗಾಳಿ ತುಂಬುವಾಗ ಟೈರ್ ಸ್ಪೋಟಗೊಂಡು ಮೇಲಕ್ಕೆ ಹಾರಿ ಬಿದ್ದ ವ್ಯಕ್ತಿ : ಭಯಾನಕ ವಿಡಿಯೋ ವೈರಲ್| Watch Video

ಉಡುಪಿ : ಬಸ್ ನ ಟೈರ್ ಸ್ಫೋಟಗೊಂಡು ಮೆಕ್ಯಾನಿಕ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕರಾವಳಿ ಜಿಲ್ಲೆಯ ಕೋಟೇಶ್ವರ ಪ್ರದೇಶದ ಬಳಿಯ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಬದಿಯ ಟೈರ್ ಅಂಗಡಿಯಲ್ಲಿ ಡಿಸೆಂಬರ್ 21 ರಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದೆ.

19 ವರ್ಷದ ಅಬ್ದುಲ್ ರಾಜೀದ್ ಖಾಸಗಿ ಶಾಲಾ ಬಸ್ ನ ಫ್ಲಾಟ್ ಟೈರ್ ಅನ್ನು ಸರಿಪಡಿಸುತ್ತಿದ್ದಾಗ ದೊಡ್ಡ ಟೈರ್’ಗೆ ಗಾಳಿಯನ್ನು ಪಂಪ್ ಮಾಡುತ್ತಿದ್ದರು ಎಂದು ವರದಿಯಾಗಿದೆ. ಕೆಲವು ಕ್ಷಣಗಳ ನಂತರ, ಟೈರ್ ಸ್ಫೋಟಗೊಂಡು, ರಜೀದ್ ಅವರನ್ನು ಗಾಳಿಯಲ್ಲಿ ಹಲವಾರು ಅಡಿಗಳಷ್ಟು ಎಸೆದಿದೆ . ಘಟನೆಯಲ್ಲಿ ರಶೀದ್ ಕೈ ಮುರಿದಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಶಾಲಾ ಬಸ್ ಅಂಗಡಿಯ ಮುಂದೆ ನಿಲ್ಲಿಸಿ ಅದರ ಟೈರ್ ಗಳಲ್ಲಿ ಒಂದನ್ನು ರಿಪೇರಿ ಮಾಡುತ್ತಿರುವುದನ್ನು ತುಣುಕು ತೋರಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...