ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ವಿಚಾರವಗಿ ಮತ್ತೊಮ್ಮೆ ಸ್ಪಷ್ಟಪಡಿಸಿರುವ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಸಿ.ಟಿ.ರವಿ ‘ಆ ಪದ’ ಬಳಸಿದ್ದು ನಿಜ. ನಾನೇ ಕೇಳಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅಂದು ವಿಧಾನ ಪರಿಷತ್ ನಲ್ಲಿ ಸಿ.ಟಿ.ರವಿ, ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆ ಪದ ಬಳಸಿದ್ದು ಸತ್ಯ. ನಾನೇ ಕೇಳಿಸಿಕೊಂಡಿದ್ದೇನೆ. ಸಿ.ಟಿ ರವಿ ಆಡಿದ ಮಾತು ಕೇಳಿ ನಾನೇ ಒಂದು ಕ್ಷಣ ದಂಗಾಗಿದ್ದೇನೆ. ಏನ್ ಇಂಥಾ ಪದ ಬಳಸುತ್ತಿದ್ದಾರಲ್ಲ ಎಂದುಕೊಂಡೆ. ಕೂಡಲೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬಳಿ ವಿಚಾರ ತಿಳಿಸಿದೆ ಎಂದರು.
ಈಗ ಸಿ.ಟಿ.ರವಿ ನಾನು ಆ ಪದ ಬಳಸಿಲ್ಲ ಎನ್ನುತ್ತಿದ್ದಾರೆ. ಈಗ ಸಿ.ಟಿ.ರವಿ ಸಿಂಪಥಿ ಗಿಟ್ಟಿಸಿಕೊಳ್ಳುವ ಡ್ರಾಮಾ ಮಾಡ್ತಿದ್ದಾರೆ. ಅವರು ಅಶ್ಲೀಲ ಪದ ಬಳಕೆ ಮಾಡಿದ್ದು ನಿಜ. ನಾನೇ ಸಾಕ್ಷಿ ಇದ್ದೇನೆ ಎಂದು ಸ್ಪಷ್ಟಪಡಿಸಿದರು.