ಬೆಂಗಳೂರು : ಕಿಚ್ಚ ಸುದೀಪ್ ನಟನೆಯ ಕನ್ನಡದ ‘ಮ್ಯಾಕ್ಸ್’ ಚಿತ್ರ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ. ಡಿಸೆಂಬರ್ 25 ಕ್ಕೆ ಮ್ಯಾಕ್ಸ್ ಚಿತ್ರ ತೆರೆಗೆ ಬರಲಿದ್ದು, ಇದೀಗ ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದೆ. ಟ್ರೇಲರ್ ನಲ್ಲಿ ನಟ ಸುದೀಪ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಕ್ರಿಸ್ ಮಸ್ ಹಬ್ಬದ ವೇಳೆ ಮ್ಯಾಕ್ಸ್ ಚಿತ್ರ ಥಿಯೇಟರ್ ನಲ್ಲಿ ಕಮಾಲ್ ಮಾಡಲಿದೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಂಯುಕ್ತ ಹೊರನಾಡು, ಸುನಿಲ್, ವರಲಕ್ಷ್ಮಿ ಶರತಕುಮಾರ್, ಪ್ರಮೋದ್ ಶೆಟ್ಟಿ, ಅನಿರುದ್ಧ ಭಟ್, ಹಾಗೂ ಸುಕೃತ ವಾಗ್ಲೆ ಉಳಿದ ಪಾತ್ರವರ್ಗದಲ್ಲಿದ್ದಾರೆ. ವಿ ಕ್ರಿಯೇಶನ್ಸ್ ಹಾಗೂ ಕಿಚ್ಚ ಕ್ರಿಯೇಶನ್ಸ್ ನಿರ್ಮಾಣ ಮಾಡಿದ್ದು, ಎಸ್ ಆರ್ ಗಣೇಶ್ ಬಾಬು ಸಂಕಲನ, ಪೆರುಮಾಳ್ ಸೆಲ್ವಮ್ ವೇಷಭೂಷಣ, ಹಾಗೂ ಶೇಖರ್ಚಂದ್ರ ಛಾಯಾಗ್ರಹಣವಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.