HomeKarnatakaBREAKING : 'ಪ್ರವೀಣ್ ನೆಟ್ಟಾರು' ಕೊಲೆ ಕೇಸ್ : 'NIA' ಯಿಂದ 6 ನೇ ಆರೋಪಿ...

BREAKING : ‘ಪ್ರವೀಣ್ ನೆಟ್ಟಾರು’ ಕೊಲೆ ಕೇಸ್ : ‘NIA’ ಯಿಂದ 6 ನೇ ಆರೋಪಿ ಮೊಹಮ್ಮದ್ ಷರೀಫ್ ಅರೆಸ್ಟ್.!

ಹಿಂದೂ ಕಾರ್ಯಕರ್ತ  ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ನೇ ಆರೋಪಿ ಮೊಹಮದ್  ಷರೀಪ್ ನನ್ನು ಬಂಧಿಸಲಾಗಿದೆ.ಪರಾರಿಯಾಗಿದ್ದ ಷರೀಪ್ ಪತ್ತೆಗೆ ಎನ್ ಐ ಎ ಅಧಿಕಾರಿಗಳು 5 ಲಕ್ಷ ಬಹುಮಾನ ಘೋಷಿಸಿದ್ದರು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ  ಮನೆ ಮೇಲೆ ಇತ್ತೀಚೆಗೆ ಎನ್ ಐ ಎ (NIA) ದಾಳಿ ನಡೆಸಿತ್ತು. ಕರ್ನಾಟಕದ 16 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು . ಎನ್ಐಎ ಆಗಸ್ಟ್ 4, 2022 ರಂದು ಸ್ಥಳೀಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡಿತ್ತು ಮತ್ತು ಜನವರಿ 2023 ರಲ್ಲಿ 21 ಆರೋಪಿಗಳ ವಿರುದ್ಧ ಚಾರ್ಜ್’ಶೀಟ್ ಸಲ್ಲಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ಪ್ರಕರಣ ?

ಪ್ರವೀಣ್ ನೆಟ್ಟಾರು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ಶಾಪ್ ಹೊಂದಿದ್ದು, 2022ರ ಜುಲೈ 26ರಂದು ರಾತ್ರಿ 8.30 ರ ಸುಮಾರಿಗೆ ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದರು. ಮೊದಲಿಗೆ ಬೆಳ್ಳಾರೆ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ಬಳಿಕ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಗೆ ವಹಿಸಲಾಗಿತ್ತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular