HomeEntertainment200 ಸಂಚಿಕೆಗಳ ಸಂಭ್ರಮದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

200 ಸಂಚಿಕೆಗಳ ಸಂಭ್ರಮದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 9:00 ಗಂಟೆಗೆ ಪ್ರಸಾರವಾಗುವ ‘ಶ್ರಾವಣಿ ಸುಬ್ರಮಣ್ಯ’ ಧಾರವಾಹಿ ಕಾಮಿಡಿ ಹಾಗೂ ಎಮೋಷನ್ ಮೂಲಕವೇ ಭರ್ಜರಿಯ  ಯಶಸ್ಸು ಕಂಡಿದ್ದು, ಜನಪ್ರಿಯ ಧಾರವಾಹಿಯಾಗಿ ಹೊರಹೊಮ್ಮಿದೆ. ಈ ಧಾರಾವಾಹಿ ಇದೀಗ 200  ಸಂಚಿಕೆಗಳನ್ನು ಪೂರೈಸಿದ್ದು, ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಈ ಧಾರಾವಾಹಿಯಲ್ಲಿ ಆಸಿಯಾ ಫಿರ್ದೋಸ್, ಅಮೋಘ್‌ ಸೇರಿದಂತೆ ಮೋಹನ್, ಕೀರ್ತಿ ವೆಂಕಟೇಶ್, ಬಾಲ್ರಾಜ್, ಸ್ನೇಹ, ಅಪೂರ್ವ, ಭವಾನಿ ಪ್ರಕಾಶ್, ಅಭಿನಯಿಸಿದ್ದು, ರೇಣುಕಾ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ನೀಲ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular