ಪವನ್ ನಾರಾಯಣ ನಿರ್ದೇಶನದ ಯಶಸ್ ಅಭಿನಯದ ಬಹುನಿರೀಕ್ಷಿತ ‘ನವಮಿ 9-9-1999’ ಚಿತ್ರದ ಮೊಟ್ಟ ಮೊದಲ ಹಾಡು ಇಂದು ಜಾನಕರ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.
ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ʼಏತಕೆ ಈ ಮೌನವೇʼ ಎಂಬ ಈ ಮೆಲೋಡಿ ಗೀತೆಗೆ ಮನೀಶ್ ದಿನಕರ್ ಮತ್ತು ಐಶ್ವರ್ಯ ರಂಗ ರಾಜನ್ ಧ್ವನಿಯಾಗಿದ್ದು, ಗಿರಿಧರ್ ದಿವಾನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ನಾಗರಾಜ್ ಶರ್ಮ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಅನ್ನಪೂರ್ಣೇಶ್ವರಿ ಕ್ರಿಯೇಶನ್ಸ್ ನಲ್ಲಿ ಶಶಿಕುಮಾರ್ ನಿರ್ಮಾಣ ಮಾಡಿದ್ದು, ಯಶಸ್ ಸೇರಿದಂತೆ ನಂದಿನಿ ಗೌಡ, ಎಸ್. ನಾರಾಯಣ್, ಓಂಪ್ರಕಾಶ್ ರಾವ್, ಶಂಕರ್ ಅಶ್ವಥ್, ಹುಚ್ಚ ವೆಂಕಟ್, ನೇಹಾ ಪಾಟೀಲ್, ಸಂದೀಪ್, ಹುಲಿ ಕಾರ್ತಿಕ್ ಅನುಶ್ರೀ, ಕುರಿ ಸುನಿಲ್, ರಾಕೇಶ್ ಗೌಡ ಬಣ್ಣ ಹಚ್ಚಿದ್ದಾರೆ. ಭಾರ್ಗವ್ KM ಸಂಕಲನ, ಹಾಗೂ PKHS ಛಾಯಾಗ್ರಹಣವಿದೆ.