ಬೆಳಗಾವಿ : ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸಿಟಿ ರವಿ ಬದುಕಿದ್ದೇ ಪುಣ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೊಳಕು ಬಾಯಿ ಇದೇನು ಹೊಸದಲ್ಲ, ಸಿಎಂ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎಂದು ನಿಂದಿಸಿದ್ದಾರೆ. ಬೇರೆಯವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ ಸಿಟಿ ರವಿ ಬದುಕಿದ್ದೇ ಹೆಚ್ಚು. ಪುಣ್ಯ ನಮ್ಮ ಕಾರ್ಯಕರ್ತರು ಸಮಾಧಾನವಾಗಿ ನಡೆದುಕೊಂಡಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೇಳಿದರು.
ಈ ವಿಚಾರದಲ್ಲಿ ಸಭಾಪತಿಗಳ ನಡೆ ಸರಿ ಇಲ್ಲ. ಅಶ್ಲೀಲ ಪದ ಬಳಕೆಯಾದಾಗ ಆ ಬಗ್ಗೆ ಚರ್ಚೆ ನಡೆಸಲು ಸದನದಲ್ಲಿ ಅವಕಾಶ ನೀಡಬೇಕಿತ್ತು ಎಂದು ಡಿಕೆಶಿ ಹೇಳಿದ್ದಾರೆ.