alex Certify BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘ಪರೀಕ್ಷಾ ಪೇ ಚರ್ಚಾ’ ಗೆ ನೋಂದಣಿ ಮಾಡಿಕೊಳ್ಳುವಂತೆ ‘ಶಿಕ್ಷಣ ಇಲಾಖೆ’ ಆದೇಶ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘ಪರೀಕ್ಷಾ ಪೇ ಚರ್ಚಾ’ ಗೆ ನೋಂದಣಿ ಮಾಡಿಕೊಳ್ಳುವಂತೆ ‘ಶಿಕ್ಷಣ ಇಲಾಖೆ’ ಆದೇಶ.!

ನವದೆಹಲಿ : ಪರೀಕ್ಷಾ ಪೆ ಚರ್ಚಾ”ದ 2025 8ನೇ ಆವೃತ್ತಿಯನ್ನು ಜನವರಿಯಲ್ಲಿ ನವದೆಹಲಿಯ ಭಾರತ್ ಮಂಟಪದಲ್ಲಿ (ಟೌನ್-ಹಾಲ್ ರೂಪದಲ್ಲಿ) ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರೊಂದಿಗೆ ವಿದ್ಯಾರ್ಥಿಗಳಲ್ಲಿರುವ “ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವ ಕುರಿತು ಜನವರಿ 2025 ಮಾಹೆಯಲ್ಲಿ ನೇರವಾಗಿ ಸಂವಹನ ನಡೆಸಲಿದ್ದಾರೆ.

ಉದ್ದೇಶಗಳು

1. ಮಕ್ಕಳಲ್ಲಿರುವ ಪರೀಕ್ಷಾ ಒತ್ತಡ ಕಡಿಮೆ ಮಾಡುವುದು.
2. ನಮ್ಮ ಭವಿಷ್ಯದ ರಾಷ್ಟ್ರ ನಿರ್ಮಾತೃಗಳಿಗೆ ಕಲಿಕೆಯನ್ನು ಹೆಚ್ಚು ಆಸಕ್ತಿ ಹಾಗೂ ಸಂತೋಷದಾಯಕವಾಗಿಸುವುದು.
3. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ನೇರ ಸಂವಹನ ನಡೆಸಿ, ಪರೀಕ್ಷಾ ಪದ್ಧತಿ ಕುರಿತು ಅಮೂಲ್ಯವಾದ ಸಲಹೆಗಳನ್ನು ಪಡೆದು ಪರೀಕ್ಷಾ ಪದ್ಧತಿಯನ್ನು ಉತ್ತಮಪಡಿಸುವುದು.
ಅರ್ಹತೆ:-
ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜುಗಳಲ್ಲಿ 6 ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಪ್ರಸಕ್ತ ಸಾಲಿನ ಸ್ಪರ್ಧೆಯು ಬಹು ಆಯ್ಕೆಯ ಪ್ರಶ್ನೆ (MCQ)ಗಳಾಗಿವೆ. ಭಾಗವಹಿಸುವವರೆಲ್ಲರಿಗೂ ಪ್ರಮಾಣ ಪತ್ರ ದೊರೆಯುವುದು.

ಭಾಗವಹಿಸುವ ವಿಧಾನ

ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ ಪೋಷಕರು https://innovateindia1.mygov.in/ 2025 ವೆಬ್ ಸೈಟ್ ಗೆ ಭೇಟಿ ನೀಡಿ ‘ಪರೀಕ್ಷಾ ಪ ಚರ್ಚಾ” 2025 ಪರೀಕ್ಷಾ ಪೆ ಚರ್ಚಾ ಈ ಕಾರ್ಯಕ್ರಮದಲ್ಲಿನ ನಿಯಮಗಳನ್ನು ಓದಿಕೊಂಡು, ಭಾಗವಹಿಸಿ ಎಂಬ ಬಟನ್ ಕ್ಲಿಕ್ ಮಾಡುವುದು ಹಾಗೂ ತಮ್ಮ ಸ್ವವಿವರಗಳನ್ನು ನೀಡಿ, ಆನ್ಲೈನ್ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿ ದೆ. ಪುಸಕ್ತ ಸಾಲಿನ ಸ್ಪರ್ಧೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳು ಹಾಗೂ ಬರವಣೆಗೆ ಅವಕಾಶವಿದೆ ಭಾಗವಹಿಸುವವರೆಲ್ಲರಿಗೂ NCERT ನಿರ್ದೇಶಕರು ಸಹಿ ಮಾಡಿದ ಪ್ರಮಾಣ ಪತ್ರ ದೊರೆಯುವುದು. ವಿಜೇತರಾದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಆನ್ ಲೈನ್ ಮೂಲಕ ಗೌರವನ್ನಿತ ಪ್ರಧಾನ ಮಂತ್ರಿಯವರು ನೇರವಾಗಿ ಸಂವಹನ ನಡೆಸುವರು.
20ನೇ ಡಿಸೆಂಬರ್. 2024 ರೊಳಗೆ ಈ ನಿಟ್ಟಿನಲ್ಲಿ ಮಾಧ್ಯಮ(Media/Website) ಯೋಜನೆಯೊಂದಿಗೆ ಟಿಪ್ಪಣಿಯನ್ನು ಹಂಚಿಕೊಂಡರೆ Website ನಲ್ಲಿ ಪ್ರದರ್ಶಿಸುತ್ತಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...